ರಾಷ್ಟ್ರೀಯ

ಡಿ.9ರಂದು ಭೂಗತ ಪಾತಕಿ ದಾವುದ್ ಇಬ್ರಾಹಿಂನ ಆಸ್ತಿ ಹರಾಜು

Pinterest LinkedIn Tumblr

dawood

ಮುಂಬೈ, ಡಿ.1: ಇಲ್ಲಿರುವ ಭೂಗತ ಪಾತಕಿ ದಾವುದ್ ಇಬ್ರಾಹಿಂನ ಆಸ್ತಿಗಳನ್ನು ಡಿ.9ರಂದು ಖಾಸಗಿ ಸಂಸ್ಥೆಯೊಂದು ಹರಾಜು ಹಾಕುತ್ತಿದೆ. ರೌನಾ ಅಫ್ರೋಜ್ ಹೊಟೇಲ್, ಕಾರು ಮತ್ತು ವಿವಿಧೆಡೆ ಭೋಗ್ಯಕ್ಕೆ ನೀಡಿರುವ 4 ಆಸ್ತಿಗಳನ್ನು ಕೂಡ ಹರಾಜು ಹಾಕಲಾಗುವುದು ಎಂದು ಸುದ್ದಿ ಮೂಲಗಳು ತಿಳಿಸಿವೆ.

ಕಳ್ಳ ಸಾಗಣೆದಾರರು ಮತ್ತು ಕಪ್ಪು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್‌ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಸರ್ಕಾರ ಹರಾಜು ಹಾಕುತ್ತಿದೆ. ಈಗಾಗಲೇ ಒಂದು ಬಾರಿ ಹರಾಜಿನಲ್ಲಿ ಕೆಲವು ಆಸ್ತಿಗಳನ್ನು ಮಾರಾಟ ಮಾಡಲಾಗಿದೆ. ಇದು ಎರಡನೆಯದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಗಿ ಭದ್ರತೆಯಲ್ಲಿ ಅಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಮುಂಬೈನಾದ್ಯಂತ ಈ ಸಂಬಂಧ ಅಂದು ಕಟ್ಟೆಚ್ಚರ ಘೋಷಿಸಲಾಗಿದೆ.

Write A Comment