ರಾಷ್ಟ್ರೀಯ

ಸರ್ದಾರ್ ಪಟೇಲ್ ಪ್ರಧಾನಿಯಾಗಿದ್ರೆ ಭಾರತ ಮತ್ತೊಂದು ಪಾಕಿಸ್ತಾನವಾಗುತ್ತಿತ್ತು: ಕಂಚಾ ಇಳಯ್ಯ

Pinterest LinkedIn Tumblr

patelನವದೆಹಲಿ: ಸ್ವಾತಂತ್ರ್ಯಾನಂತರ ಒಂದು ವೇಳೆ, ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದಲ್ಲಿ ಪ್ರಧಾನಿಯಾಗಿದ್ದಲ್ಲಿ ಭಾರತ ಕೂಡಾ ಪಾಕಿಸ್ತಾನ ದಾರಿಯಲ್ಲಿಯೇ ಸಾಗುತ್ತಿತ್ತು ಎಂದು ದಲಿತ ಕಾರ್ಯಕರ್ತ ಕಂಚಾ ಇಳಯ್ಯ ಹೇಳಿದ್ದಾರೆ.

ಸರ್ದಾರ್ ಪಟೇಲರು ಪ್ರಧಾನಿಯಾಗಿದ್ದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯುವ ಅಕಾಶ ನೀಡುತ್ತಿರಲಿಲ್ಲ. ಅವರು ಹಿಂದೂ ಮಹಾಸಭಾಗೆ ತುಂಬಾ ಆತ್ಮಿಯರಾಗಿದ್ದರು. ಮನುಸ್ಮೃತಿಯಲ್ಲಿ ನಂಬಿಕೆಯುಳ್ಳುವರು ಸಂವಿಧಾನ ಬರೆಯುತ್ತಿದ್ದರು. ಭಾರತ ಕೂಡಾ ಪಾಕಿಸ್ತಾನ ಸಾಗಿದ ದಾರಿಯಲ್ಲಿಯೇ ಸಾಗಿ ಪ್ರಜಾಪ್ರಭುತ್ವ ಪತನವಾಗುತ್ತಿತ್ತು. ಆದರೆ, ಆರಂಭದ 17 ವರ್ಷಗಳು ಮಾತ್ರ ಭಾರತ, ಪಾಕಿಸ್ತಾನದಂತೆ ಇಕ್ಕಟ್ಟಿನಲ್ಲಿ ಸಿಲುಕುತ್ತಿತ್ತು ಎಂದಿದ್ದಾರೆ.

ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಸದಸ್ಯ ಸುಧೀಂದ್ರ ಕುಲ್ಕರ್ಣಿ ಮಾತನಾಡಿ, ದೇಶದ ಮೊಟ್ಟಮೊದಲ ಗೃಹ ಸಚಿವರು ಶ್ರೇಯಾಂಕ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದಿದ್ದಾರೆ. ಕೊನೆಯ ಸ್ಥಾನ ಪಡೆದವರು ಸಾಮಾಜಿಕ ಏಕತೆ, ಸಮಾನತೆ ಅಥವಾ ರಾಜಕೀಯ ಒಮ್ಮತ ಪಡೆಯಲು ಸಾಧ್ಯವಿಲ್ಲ ಎಂದರು.

ಪ್ರಸ್ತುತ ನಾವು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಉಕ್ಕಿನ ಮನುಷ್ಯರ ಅಗತ್ಯವಿಲ್ಲ. ಒಂದು ವೇಳೆ, ಪಟೇಲರು ಪ್ರಧಾನಿಯಾಗಿದ್ದರೂ ಇಂದಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿರಲಿಲ್ಲ. ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಾಯಕ ನಮಗೆ ಬೇಕಾಗಿದೆ ಎಂದು ಬಿಜೆಪಿ ಮುಖಂಡ ಸುಧೀಂದ್ರ ಕುಲ್ಕರ್ಣಿ ಅಭಿಪ್ರಾಯಪಟ್ಟರು.

Write A Comment