ರಾಷ್ಟ್ರೀಯ

ಕಪಾಳಮೋಕ್ಷ: ಅಭಿಮಾನಿಗೆ ಕ್ಷಮೆಯಾಚಿಸುವಂತೆ ನಟ ಗೋವಿಂದ್‌ಗೆ ಸುಪ್ರೀಂಕೋರ್ಟ್ ಆದೇಶ

Pinterest LinkedIn Tumblr

goviನವದೆಹಲಿ: ಕಳೆದ 2008ರಲ್ಲಿ ಅಭಿಮಾನಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದ ಬಾಲಿವುಡ್ ನಟ ಗೋವಿಂದಾ, ಇನ್ನೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವರ್ತನೆ ತೋರಬಾರದು. ಅಭಿಮಾನಿಯ ಕ್ಷಮೆಯಾಚಿಸಿ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ನ್ಯಾಯಪೀಠ, ನಟ ಗೋವಿಂದಾ ತಮ್ಮ ಅಭಿಮಾನಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ದೃಶ್ಯ ವಿಕ್ಷೀಸಿ, ಗೋವಿಂದಾ ಅವರ ವರ್ತನೆಗೆ ಬೇಸರ ವ್ಯಕ್ತಪಡಿಸಿತು.

ಗೋವಿಂದಾ ಸಾರ್ವಜನಿಕ ವ್ಯಕ್ತಿಯಾಗಿದ್ದರಿಂದ ಇಂತಹ ಘಟನೆಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ರೀಲ್ ಲೈಫ್‌ನಲ್ಲಿರುವುದನ್ನು ರಿಯಲ್ ಲೈಫ್‌ನಲ್ಲಿ ಮಾಡುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಕಪಾಳಮೋಕ್ಷ ಮಾಡಿದ ಅಭಿಮಾನಿಯ ಕ್ಷಮೆ ಕೋರಿ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಿ ಎಂದು ಕೋರ್ಟ್ ನಟ ಗೋವಿಂದನಿಗೆ ಸಲಹೆ ನೀಡಿದೆ.

Write A Comment