ರಾಷ್ಟ್ರೀಯ

ಮದರಸಾದಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು: ಮಲೆಯಾಳಂನ ಚಿತ್ರ ನಿರ್ದೇಶಕ ಅಲಿ ಅಕ್ಬರ್

Pinterest LinkedIn Tumblr

ali-akbar

ತಿರುವನಂತಪುರ: ಕೇರಳ ಮೂಲದ ಪತ್ರಕರ್ತೆಯೊಬ್ಬರು ಮದರಸಾದಲ್ಲಿ ಓದುತ್ತಿದ್ದಾಗ ತನ್ನ ಸಹಪಾಠಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಹೇಳಿದ ಬೆನ್ನಲ್ಲೇ, ಇದೀಗ ಮಲೆಯಾಳಂನ ಚಿತ್ರ ನಿರ್ದೇಶಕರೊಬ್ಬರು ತನ್ನ ಮೇಲೂ ಮದರಸಾದಲ್ಲಿ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಸೋಮವಾರ ಹೇಳಿದ್ದಾರೆ.

ನಾನು ಯುವಕನಾಗಿದ್ದಾಗ ಮದರಸಾಗೆ ಭೇಟಿ ನೀಡಿದಾಗ ಅಲ್ಲಿನ ಶಿಕ್ಷಕರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಿರ್ದೇಶಕ ಅಲಿ ಅಕ್ಬರ್ ಅವರು ಹೇಳಿಕೊಂಡಿದ್ದಾರೆ. ಕೇರಳದ ಮದರಸಾಗಳಲ್ಲಿ ಸಾಕಷ್ಟು ಜನರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಆದರೆ ಧರ್ಮದ ಭಯದಿಂದ ಯಾರೂ ಹೇಳಿಕೊಳ್ಳಲ್ಲ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

ಧಾರ್ಮಿ ಮುಖಂಡರು ಮದರಸಾಗಳಲ್ಲಿನ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡುವವರನ್ನು ಸಾಯಿಸುತ್ತಾರೆ ಎಂದು ಅಕ್ಬರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ವೊಟ್ ಬ್ಯಾಂಕ್‌ಗಾಗಿ ಅಂತವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲ್ಲ ಎಂದು ದೂರಿದ್ದಾರೆ.

ಗೋಮಾಂಸಕ್ಕೆ ಸಂಬಂಧಿಸಿದಂತೆ ಹಲವು ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಮದರಸಾಗಳಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಇದುವರೆಗೂ ಒಂದೇ ಒಂದು ಪ್ರತಿಭಟನೆ ನಡೆದಿಲ್ಲ ಎಂದು ಅಕ್ಬರ್ ತೀವ್ರ ಅಸಮಾಧಾನ್ಯ ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಠಿತ ಮಲಯಾಳಂ ಪತ್ರಿಕೆಯೊಂದರಲ್ಲಿ ಹಿರಿಯ ಪತ್ರಕರ್ತೆಯಾಗಿರುವ ಕೋಝಿಕ್ಕೋಡ್ ಮೂಲದ ವಿಪಿ ರಜೀನಾ ಮದರಸಾದಲ್ಲಿ ಓದುತ್ತಿದ್ದಾಗ ತನ್ನ ಸಹಪಾಠಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದುನವೆಂಬರ್ 21 ರಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಹಾಕಿದ ನಂತರ ಅವರಿಗೆ ಬೆದರಿಕೆ ಕರೆಗಳು ಬರತೊಡಗಿದ್ದವು.

Write A Comment