ರಾಷ್ಟ್ರೀಯ

ಮನ್‍ಕೀಬಾತ್‍ನಲ್ಲಿ ಪ್ರಧಾನಿ ಮೋದಿ ಗುಣಗಾನ ಮಾಡಿದ ನೂರ್ ಜಹಾನ್ ಯಾರು…?

Pinterest LinkedIn Tumblr

mo-noo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್‍ನಲ್ಲಿ ಜಾಗತಿಕ ತಾಪಮಾನ ಕುರಿತು ಮಾತನಾಡಿದರು. ಈ ವೇಳೆ ಇಂಧನ ಸುರಕ್ಷಣೆ ಮತ್ತು ಇಂಧನ ದಕ್ಷತೆಗೆ ಕೊಡುಗೆ ನೀಡುತ್ತಿರುವ ಕಾನ್ಪುರದ ಪುಟ್ಟ ಗ್ರಾಮದ ಮಹಿಳೆಯೊಬ್ಬರನ್ನ ನೆನಪು ಮಾಡಿಕೊಂಡರು. ಆ ಮಹಿಳೆಯೆ ನೂರ್ ಜಹಾನ್.

ಉತ್ತರಪ್ರದೇಶದ ಕಾನ್ಪುರದ ಬೆರಿಧರ್‍ವಾನಿ ಗ್ರಾಮದ 55 ವರ್ಷದ ನೂರ್ ಜಹಾನ್. 3 ವರ್ಷದಿಂದ ತನ್ನ ಊರಲ್ಲಿ 5 ಸೋಲಾರ್ ಪ್ಯಾನೆಲ್‍ಗಳನ್ನು ಹಾಕಿಕೊಂಡು ಸೌರಶಕ್ತಿಯನ್ನ ಸಂಗ್ರಹ ಮಾಡುತ್ತಿದ್ದಾರೆ. ಹೀಗೆ ಸಂಗ್ರಹವಾದ ವಿದ್ಯುತ್ತನ್ನು 50 ಎಮರ್ಜೆನ್ಸಿ ಲೈಟ್‍ಗಳಿಗೆ ಚಾರ್ಜ್‍ಮಾಡಿ ಬಾಡಿಗೆಗೆ ಕೊಡುತ್ತಾರೆ. ದಿನಕ್ಕೆ ಒಂದು ಲೈಟ್‍ಗೆ 3 ರುಪಾಯಿ. ತಿಂಗಳಿಗೆ 100 ರುಪಾಯಿಗೆ ಬಾಡಿಗೆ ಕೊಡುತ್ತ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಮನ್‍ಕೀ ಬಾತ್‍ನಲ್ಲಿ ಮೋದಿ ನೂರ್‍ಜಹಾನ್ ಬಗ್ಗೆ ಹೇಳುತ್ತಿದ್ದಂತೆ ಆಕೆಯನ್ನು ಮಾಧ್ಯಮ ಲೋಕವೇ ಬೆನ್ನುಬಿತ್ತು. ಆಗ ಆಕೆ ಗಲಿಬಿಲಿಯಾದರು, ಖುಷಿಪಟ್ಟರು. ಕೊನೆಗೆ ತನ್ನ ಕೆಲಸದ ಬಗ್ಗೆ ಹೇಳಿದ್ದಾರೆ.

ವಿಶೇಷವೆಂದರೆ ಈ ಊರಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ. 10 ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡ ಮಹಿಳೆಗೆ ಎನ್‍ಜಿಓ ಸಂಸ್ಥೆ ತೋರಿಸಿದ ಮಾರ್ಗದರ್ಶನ ಈಕೆಯನ್ನು ಈ ಮಟ್ಟಕ್ಕೆ ಬೆಳೆಸಿದೆ.

Write A Comment