ರಾಷ್ಟ್ರೀಯ

‘ದೀಪಾವಳಿ ಮಿಲನ’ದಲ್ಲಿ ತಾರತಮ್ಯ, ಸಮಾನತೆ ಬಗ್ಗೆ ಮಾತನಾಡಿದ ಮೋದಿ

Pinterest LinkedIn Tumblr

pmmodi-28ನವದೆಹಲಿ: ಭಾರತೀಯ ಹಬ್ಬಗಳು ಸಮಾಜಕ್ಕೆ ಹೊಸ ಸ್ಪೂರ್ತಿಯನ್ನು ನೀಡುತ್ತವೆ. ಅದರಲ್ಲಿ ಬೆಳಕಿನ ಹಬ್ಬ ದೀಪಾವಳಿಯೂ ಒಂದು. ಇಲ್ಲಿ ಯಾವುದೇ ತಾರತಮ್ಯ ಇಲ್ಲ. ಇದು ಸಮಾನತೆಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

‘ದೀಪಾವಳಿ ಮಿಲನ’ದ ಅಂಗವಾಗಿ ಇಂದು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕುಂಬ ಮೇಳ ಸೇರಿದಂತೆ ಹಲವು ಹಬ್ಬಗಳು ಸಮಾಜದಲ್ಲಿ ಜನರನ್ನೂ ಒಗ್ಗೂಡಿಸುತ್ತೇವೆ. ಇದು ಹಬ್ಬಗಳಿಗೆ ಇರುವ ಒಂದು ದೊಡ್ಡ ಶಕ್ತಿ ಎಂದರು.

ಈ ಕಾರ್ಯಕ್ರಮ ದೀಪಾವಳಿ ವೇಳೆ ನಡೆಯಬೇಕಿತ್ತು. ಆದರೆ ಬಿಡುವಿಲ್ಲದ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ತಡವಾಯಿತು ಎಂದು ಪ್ರಧಾನಿ ಹೇಳಿದರು.

ಈ ವೇಳೆ ಕೆಲವು ಪತ್ರಕರ್ತರು ಪ್ರಧಾನಿಗೆ ಅಭಿನಂದನೆ ಸಲ್ಲಿಸಿದರೆ, ಮತ್ತೆ ಕೆಲವರು ಮೋದಿಯೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

Write A Comment