ರಾಷ್ಟ್ರೀಯ

ಇಡೀ ಭಾರತೀಯ ಸೇನೆಯಿಂದಲೂ ಕಾಶ್ಮೀರವನ್ನು ಉಗ್ರರಿಂದ ರಕ್ಷಿಸಲು ಸಾಧ್ಯವಿಲ್ಲ: ಫಾರೂಕ್‌ ಅಬ್ದುಲ್ಲಾ

Pinterest LinkedIn Tumblr

faruk28ಜಮ್ಮು: ನಿನ್ನೆಯಷ್ಟೇ ಪಾಕ್‌ ಆಕ್ರಮಿತ ಕಾಶ್ಮೀರ ಪಾಕಿಸ್ತಾನನದ್ದು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರು ಈಗ ಇಡೀ ಭಾರತೀಯ ಸೇನೆಯೇ ಬಂದರೂ ಕಾಶ್ಮೀರವನ್ನು ಉಗ್ರರಿಂದ ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮತ್ತೊಂದು ವಿವಾದಾಕ್ಕೆ ಕಾರಣವಾಗಿದ್ದಾರೆ.

‘ಇಡೀ ಭಾರತೀಯ ಸೇನೆಯೇ ಜಮ್ಮು ಮತ್ತು ಕಾಶ್ಮೀರಕ್ಕೆ ಬಂದರೂ ಕಾಶ್ಮೀರವನ್ನು ಉಗ್ರರಿಂದ ರಕ್ಷಿಸುವುದಕ್ಕೆ ಸಾಧ್ಯವಾಗದು’ ಎಂದು ಹೇಳುವ ಮೂಲಕ ಅಬ್ದುಲ್ಲಾ ಅವರು ವಿಶ್ವದ ಅತೀ ಬಲಿಷ್ಠ ಸೇನಾಶಕ್ತಿಗಳಲ್ಲಿ ಒಂದಾದ ಭಾರತೀಯ ಸೇನೆಯನ್ನು ನಿಕೃಷ್ಟವಾಗಿ ಕಂಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಕೇವಲ ಮಾತುಕತೆಯ ಮೂಲಕವೇ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಬಲ್ಲವು, ಅದಕ್ಕೆ ಬೇರೆ ಮಾರ್ಗವೇ ಇಲ್ಲ ಎಂದು ಅಬ್ದುಲ್ಲಾ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ

ಉಭಯ ದೇಶಗಳ ಜನರ ನಡುವೆ ನೇರ ಸಂಪರ್ಕ – ಸಂವಹನಕ್ಕೆ ಅವಕಾಶವಾದಾಗಲೇ ಪರಸ್ಪರ ವಿಶ್ವಾಸ ಹಾಗೂ ನಿರ್ಭಯದ ವಾತಾವರಣ ಸೃಷ್ಟಿ ಮಾಡಲು ಸಾಧ್ಯ ಎಂದು ಅಬ್ದುಲ್ಲಾ ಹೇಳಿದ್ದಾರೆ.

Write A Comment