ರಾಷ್ಟ್ರೀಯ

ಬಾಂಗ್ಲಾ ಅಕ್ರಮ ವಲಸಿಗರಿಗೆ ಅನುಮತಿ ನೀಡುತ್ತಿದೆ ಅಸ್ಸಾಂ ಸರ್ಕಾರ: ಅಮಿತ್ ಶಾ

Pinterest LinkedIn Tumblr

Amit-Shahದಿಬ್ರೂಘರ್ನ: ಅಸ್ಸಾಂನಲ್ಲಿ ಕಾಂಗ್ರೆಸ್ ಮತಕ್ಕಾಗಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಅನುಮತಿ ನೀಡುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ.

ಈ ಕುರಿತಂತೆ ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ರಾಷ್ಟ್ರದ ಭದ್ರತೆಯಿಂದಾಗಿ ಬಿಜೆಪಿಯು ಎಂದಿಗೂ ವೋಟ್ ಬ್ಯಾಂಕ್ ರಾಜಕೀಯದಲ್ಲಿ ರಾಜಿಯಾಗಿಲ್ಲ. ಕಾಂಗ್ರೆಸ್ ಆಡಳಿತವಿರುವ ಅಸ್ಸಾಂ ರಾಜ್ಯದಲ್ಲಿ ಅಕ್ರಮ ವಲಸಿಗರಿಗೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಎಐಯುಡಿಎಫ್ ಬಗ್ಗೆ ಕಾಂಗ್ರೆಸ್ ಪಕ್ಷ ಮೌನವಹಿಸಿದ್ದು, ಅಸ್ಸಾಂ ಮುಖ್ಯಮಂತ್ರಿ ಎಐಯುಡಿಎಫ್ ಮುಖ್ಯಸ್ಥ ಮೌಲನಾ ಬಾದರುದ್ದೀನ್ ಅಜ್ಮಲ್ ಬಗ್ಗೆ ಪ್ರತಿಕ್ರಿಯೆ ನೀಡಲು ಹೆದರುತ್ತಿದ್ದಾರೆ. ಬಾಂಗ್ಲಾದೇಶಿಗರು ಅಸ್ಸಾಂನಲ್ಲಿ ಮುಕ್ತವಾಗಿರಲು ಕಾಂಗ್ರೆಸ್ ಹಾಗೂ ಎಐಯುಡಿಎಫ್ ಬಿಡುತ್ತದೆ ಎಂದು ನೀವು ನಂಬಿದ್ದೀರಾ…? ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಈ ರೀತಿ ಮಾಡುತ್ತಿದೆ ಎಂದು ಹೇಳಿದ್ದಾರೆ.

ಅಂತರಾಷ್ಟ್ರೀಯ ಗಡಿಗಳ ಜೊತೆ ಅಸ್ಸಾಂ ರಾಜ್ಯವಿದೆ. ಗಡಿಯಲ್ಲಿ ಮುಂಭಾಗದ ರಾಜ್ಯವಾಗಿರುವ ಅಸ್ಸಾಂನ ಗಡಿ ಪ್ರದೇಶಗಳಲ್ಲಿ ಭದ್ರತೆಯೊದಗಿಸುವುದರ ಬಗ್ಗೆ ನಮಗೆ ತಿಳಿದಿದೆ. ರಾಜ್ಯಕ್ಕೆ ದೇಶಭಕ್ತಿಯಿರುವ ಸರ್ಕಾರ ಬೇಕಿದ್ದು, ರಾಷ್ಟ್ರೀಯ ಭದ್ರತೆ ಪ್ರಾಮುಖ್ಯತೆಯ ಕುರಿತಂತೆ ಸರ್ಕಾರ ಅರ್ಥವಾಗುತ್ತದೆ. ಬಿಜೆಪಿ ಸರ್ಕಾರ ಈ ಎಲ್ಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ತರುಣ್ ಗಗೋಯ್ ಬಗ್ಗೆ ಕಿಡಿಕಾರಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಭಾರತ-ಬಾಂಗ್ಲಾದೇಶ ಭೂ ಗಡಿ ಒಪ್ಪಂದವನ್ನು ಸಮರ್ಥಿಸಿಕೊಂಡಿರುವ ಅವರು, ನೆರೆ ರಾಷ್ಟ್ರದೊಂದಿಗಿರುವ ಅಕ್ರಮ ಒಳನುಸುಳುವಿಕೆ ಸಮಸ್ಯೆಯನ್ನು ಕೇಂದ್ರ ಶೀಘ್ರದಲ್ಲೇ ಬಗೆಹರಿಸಲಿದೆ ಎಂದು ಹೇಳಿದ್ದಾರೆ.

Write A Comment