ರಾಷ್ಟ್ರೀಯ

ವೈಷ್ಣೋದೇವಿ ಬಳಿ ಹೆಲಿಕಾಪ್ಟರ್ ಅಪಘಾತ: ಮಹಿಳಾ ಪೈಲಟ್ ಸಹಿತ 7 ಮಂದಿ ಮೃತ್ಯು

Pinterest LinkedIn Tumblr

Planeಶ್ರೀನಗರ, ನ.23: ಜಮ್ಮುವಿನ ಪ್ರಸಿದ್ಧ ಯಾತ್ರಾಸ್ಥಳ ವೈಷ್ಣೋದೇವಿಗೆ ಯಾತ್ರಿಕರನ್ನು ಕೊಂಡೊ ಯ್ಯುತ್ತಿದ್ದ ಹೆಲಿಕಾಪ್ಟರೊಂದು ಸೋಮವಾರ ಜಮ್ಮುವಿನ ಕತ್ರಾದಲ್ಲಿ ಅಪಘಾತಕ್ಕೀಡಾಗಿ ಮಹಿಳಾ ಪೈಲಟ್ ಸಹಿತ 7 ಮಂದಿ ಸಾವಿಗೀಡಾಗಿದ್ದಾರೆ.

ಕತ್ರಾ ಪಟ್ಟಣದಿಂದ ಹಾರಾಟ ಆರಂಭಿಸಿದ ಹೆಲಿಕಾಪ್ಟರ್ ಸಂಜಿಚಾಚ್ ಎಂಬಲ್ಲಿ ಪತನಗೊಂಡಿ ತೆಂದು ಪೊಲೀಸರು ತಿಳಿಸಿದ್ದಾರೆ. ಮೃತರೆಲ್ಲರೂ ಜಮ್ಮು ಹಾಗೂ ದಿಲ್ಲಿಯ ನಿವಾಸಿಗಳೆಂದು ಅಧಿಕೃತ ಮೂಲಗಳು ತಿಳಿಸಿವೆ.

ಮೃತ ಯಾತ್ರಿಕರನ್ನು ಆರ್ಯನ್‌ಜಿತ್ ಸಿಂಗ್, ಸಚಿನ್, ಮಹೇಶ್, ವಂದನಾ, ಅಮೃತ್‌ಪಾಲ್ ಹಾಗೂ ಐದರ ಹರೆಯದ ಅಕ್ಷಿತಾ ಎಂದು ಗುರುತಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳಾ ಪೈಲಟ್ ಹೈದರಾಬಾದ್ ಮೂಲದ ಸುನೀತಾ ವಿಜಯನ್ ಎಂದು ತಿಳಿದುಬಂದಿದೆ. ಮೃತ ಯಾತ್ರಿಕರು ದಿಲ್ಲಿ ಹಾಗೂ ಜಮ್ಮು ನಿವಾಸಿಗಳಾಗಿದ್ದಾರೆ. ಹೆಲಿಕಾಪ್ಟರ್ ದುರಂತದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತ ಯಾತ್ರಿಕರು ಜಮ್ಮು ಹಾಗೂ ದಿಲ್ಲಿಯ ನಿವಾಸಿಗಳೆಂದು ಅಧಿಕೃತ ಮೂಲಗಳು ತಿಳಿಸಿವೆ.

Write A Comment