ರಾಷ್ಟ್ರೀಯ

ಉಗ್ರರೊಂದಿಗೆ ಕಾಂಗ್ರೆಸ್ ನಂಟು ಹೇಳಿಕೆಗೆ ಖಂಡನೆ

Pinterest LinkedIn Tumblr

singh-newನವದೆಹಲಿ: ಕಾಂಗ್ರೆಸ್ ಮಹಾಮೈತ್ರಿಕೂಟಕ್ಕೆ ಭಯೋತ್ಪಾದಕರೊಂದಿಗೆ ನಂಟಿದೆ ಎಂಬ ಪಂಜಾಬ್‌ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್‌ ಹೇಳಿಕೆಯನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ.

ಕಾಂಗ್ರೆಸ್‌ ಮುಖಂಡ ಹಾಗೂ ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್ ಹಾಗೂ ದಾಲ್ ಖಾಲ್ಸಾ ಸಂಘಟನೆಯ ಎಚ್‌.ಎಸ್‌.ದಾಮಿ ಅವರು ಡಿಸಿಎಂ ಬಾದಲ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಸುಖ್ಬೀರ್ ಸಿಂಗ್ ಬಾದಲ್‌ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಸಿಖ್‌ ಮೂಲಭೂತವಾದಿ ಸಂಘಟನೆಗಳ ಜತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳಲಿದೆ ಎಂದು ಬಾದಲ್‌ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಹೇಳಿದ್ಧಾರೆ.

ಭಯೋತ್ಪಾದಕ ಸಂಘಟನೆಯೊಂದಿಗೆ ಕಾಂಗ್ರೆಸ್‌ಗೆ ನೇರ ಸಂಪರ್ಕವಿದ್ದು, ಖಾಲಿಸ್ತಾನ ಪ್ರತ್ಯೇಕವಾದಿಗಳ ಜತೆ ಆ ಪಕ್ಷ ನಂಟು ಹೊಂದಿದೆ ಎಂದು  ಪಂಜಾಬ್‌ ಡಿಸಿಎಂ .ಸುಖ್ಬೀರ್ ಸಿಂಗ್ ಬಾದಲ್‌ ಆರೋಪಿಸಿದ್ದರು. ಅಲ್ಲದೆ ಉಗ್ರ ಸಂಘಟನೆಗಳ ಜತೆಗೆ ಕಾಂಗ್ರೆಸ್‌ ಹೊಂದಿರುವ ನಂಟನ್ನು ಸಾಬೀತುಪಡಿಸುವಂಥ ವಿಡಿಯೋವನ್ನೂ ಬಿಡುಗಡೆ ಮಾಡಿದ್ದರು

Write A Comment