ರಾಷ್ಟ್ರೀಯ

ಇಸೀಸ್ ನೊಂದಿಗೆ ಸಂಪರ್ಕ ಹೊಂದಿರುವ 150 ಭಾರತೀಯ ಯುವಕರ ಮೇಲೆ ಐಬಿ ಕಣ್ಗಾವಲು

Pinterest LinkedIn Tumblr

ISISನವದೆಹಲಿ: ಪ್ಯಾರಿಸ್ ದಾಳಿ ಮಾದರಿಯಲ್ಲೇ ಭಾರತದಲ್ಲೂ ಇಸೀಸ್ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಕ್ಕೆ ಪೂರಕವಾದ ಅಂಶವೊಂದು ಬೆಳಕಿಗೆ ಬಂದಿದೆ. ಭಾರತದಲ್ಲಿ ಸುಮಾರು 150 ಯುವಕರು ಇಸ್ಲಾಮಿಕ್ ಸ್ಟೇಟ್ ನೊಂದಿಗೆ ಸಂಪರ್ಕದಲ್ಲಿದ್ದು ಅವರ ಮೇಲೆ ಕಣ್ಗಾವಲಿಡಲಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಗುಪ್ತಚರ ಇಲಾಖೆ ಸಿದ್ಧಪಡಿಸಿರುವ ವರದಿ ಪ್ರಕಾರ 150 ಯುವಕರು, ಬಹುತೇಕ ದಕ್ಷಿಣ ಭಾರತದವರಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ. ಆನ್ ಲೈನ್ ಮೂಲಕ ಯುವಕರು ಇಸ್ಲಾಮಿಕ್ ಸ್ಟೇಟ್ ನೊಂದಿಗೆ ಸಂಪರ್ಕದಲ್ಲಿದ್ದಾರೆ, ಆದ್ದರಿಂದ ಅವರ ಚಟುವಟಿಕೆಗಳ ಬಗ್ಗೆ ಕಣ್ಗಾವಲಿಡಲಾಗಿದೆ.

ಭಾರತದಿಂತ ಇಸ್ಲಾಮಿಕ್ ಸ್ಟೇಟ್ ಗೆ ಸೇರಲು ತೆರಳಿದ್ದ 23 ಯುವಕರ ಪೈಕಿ ಆರು ಜನರನ್ನು ಹತ್ಯೆ ಮಾಡಲಾಗಿದ್ದು ಓರ್ವ ಮಾತ್ರ ಜೀವಂತವಾಗಿ ಭಾರತಕ್ಕೆ ವಾಪಸ್ಸಾಗಿ ಮುಂಬೈ ನಲ್ಲಿದ್ದಾನೆ. ಇಸ್ಲಾಮಿಕ್ ಸ್ಟೇಟ್ ಗೆ ಉಗ್ರ ಸಂಘಟನೆ ಸೇರಲು ಸಿದ್ಧತೆ ನಡೆಸಿದ್ದ ಇನ್ನೂ 30 ಜನರನ್ನು ತಡೆಗಟ್ಟಲಾಗಿತ್ತು. ಸೆಪ್ಟೆಂಬರ್ 15 ರಂದು ಯುಎಇ ನಾಲ್ಕು ಭಾರತೀಯರನ್ನು ಐಎಸ್ಐಎಸ್ ನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಗಡಿಪಾರು ಮಾಡಿತ್ತು.

Write A Comment