ರಾಷ್ಟ್ರೀಯ

ಮೋದಿ ತಮ್ಮ ಪ್ರಶ್ನೆಗಳಿಗೆ ಉತ್ತರಿಸಿದರೇ ಅಚ್ಚೇ ದಿನ್ ಬರುತ್ತದೆ: ರಾಹುಲ್ ಗಾಂಧಿ

Pinterest LinkedIn Tumblr

1010rahul-newನವದೆಹಲಿ: ಆರ್ ಎಸ್ ಎಸ್ ಮತ್ತು ಕಾಂಗ್ರೆಸ್ ನಡುವೆ ತುಂಬಾ ವ್ಯತ್ಯಾಸವಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಪಂಡಿತ್ ಜವಹರ್ ಲಾಲ್ ನೆಹರೂ ಅವರ 126 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಪ್ರಧಾನಿಗೆ ಸಂಸತ್ತಿನಲ್ಲಿ ಕುಳಿತು ಚರ್ಚಿಸಲು ಆಸಕ್ತಿಯಿಲ್ಲ, ಹೀಗಾಗಿ ವಿರೋಧ ಪಕ್ಷದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಮೋದಿಗೆ ಇಷ್ಟವಿಲ್ಲ ಎಂದು ರಾಹುಲ್ ಟೀಕಿಸಿದರು.

ಬ್ರಿಟನ್ ಪ್ರವಾಸದಲ್ಲಿರುವ ನಮ್ಮ ಪ್ರಧಾನಿ ಅಲ್ಲಿ ತಮ್ಮ ಭಾಷಣದಲ್ಲಿ ಭಾರತ ತುಂಬಾ ಸಹಿಷ್ಣುತೆಯ ದೇಶ ಎಂದು ಎಂದು ಹೇಳುತ್ತಾರೆ. ಆದರೆ ದೇಶದಲ್ಲಿ ಅದು ನಿಜವಾಗಿಯೂ ಇದೆಯಾ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಒಂದು ವೇಳೆ ನರೇಂದ್ರ ಮೋದಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರೇ ದೇಶದಲ್ಲಿ ಅಚ್ಚೆ ದಿನ ಬರುತ್ತದೆ ಎಂದು ವ್ಯಂಗ್ಯವಾಡಿದರು.

ಇನ್ನು ಆರ್ ಎಸ್ ಎಸ್ ಮತ್ತು ಕಾಂಗ್ರೆಸ್ ನಡುವೆ ಅಪಾರ ವ್ಯತ್ಯಾಸವಿದೆ. ಕಾಂಗ್ರೆಸ್ ಎಲ್ಲಾ ಜನರಿಗೂ ಸ್ಥಳ ನೀಡುತ್ತದೆ. ಆದರೆ ಆರ್ ಎಸ್ ಎಸ್ ಎಲ್ಲಾ ಜನರು ಒಂದೇ ಸಾಲಿನಲ್ಲಿ ನಿಲ್ಲಲು ಬಯಸುತ್ತದೆ. ಆರ್ ಎಸ್ ಎಸ್ ಒಂದು ಧ್ವನಿಯಲ್ಲಿ ಒಂದೇ ಹಾಡನ್ನು ಕೇಳಲು ಬಯಸುತ್ತದೆ, ಆದರೆ ನಾವು ವೈವಿದ್ಯತೆಯಲ್ಲಿ ಏಕತೆ ಬಯಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ಇನ್ನು ಇದೇ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಂಡಿತ್ ಜವಹರ್ ಲಾಲ್ ನೆಹರೂ ಬಯಸಿದ್ದರೇ ಆರಾಮದಾಯಕ ಜೀವನ ನಡೆಸಬಹುದಿತ್ತು, ಆದರೆ ಅವರು ದೇಶದ ಜನತೆಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ತಮ್ಮ ಜೀವನವನ್ನು ತ್ಯಾಗ ಮಾಡಿದರು ಎಂದು ಅಭಿಪ್ರಾಯ ಪಟ್ಟರು.

Write A Comment