ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಎಂ.ಎಸ್.ಧೋನಿಯಂತೆ: ಲಕ್ಷ್ಮಿಕಾಂತ್ ಬಾಜ್‌ಪೈ

Pinterest LinkedIn Tumblr

bjpಮೀರತ್,: ಬಿಹಾರ್ ಚುನಾವಣೆ ಹೀನಾಯ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಹಲವರ ತರಾಟೆಗೆ ಒಳಗಾಗಿದ್ದರೂ ಪ್ರಧಾನಿ ಮೋದಿ ಎಂ.ಎಸ್.ಧೋನಿಯಂತೆ ಎಂದು ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಲಕ್ಷ್ಮಿಕಾಂತ್ ಬಾಜ್‌ಪೈ ಹೊಗಳಿದ್ದಾರೆ.

ಬಿಹಾರ್ ಚುನಾವಣೆ ಫಲಿತಾಂಶದಂತೆ 2017ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೂ ಪ್ರಭಾವ ಬೀರಲಿದೆಯೇ ಎನ್ನುವ ಚಿಂತೆ ಬಿಜೆಪಿ ನಾಯಕರನ್ನು ಕಾಡುತ್ತಿದೆ.

ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಿಕಾಂತ್ ಬಾಜ್‌ಪೈ ಮಾತನಾಡಿ, ಮೋದಿ ಮತ್ತು ಅಮಿತ್ ಶಾ ನಾಯಕತ್ವದ ಮೇಲೆ ತುಂಬಾ ನಂಬಿಕೆಯಿದೆ. ಮೋದಿ, ಟೀಂ ಇಂಡಿಯಾ ತಂಡದ ನಾಯಕ ಧೋನಿಯಂತೆ. ಶ್ರೇಷ್ಠ ನಾಯಕರು ಒಂದೆರೆಡು ಪಂದ್ಯಗಳಲ್ಲಿ ಸೋಲನುಭವಿಸುತ್ತಾರೆ ಎಂದು ಉದಾಹರಣೆ ನೀಡಿದ್ದಾರೆ.

ಅದಕ್ಕೆ ಉತ್ತಮ ಉದಾಹರಣೆಯಂದರೆ ಧೋನಿ. ಕಳೆದ 2011ರಲ್ಲಿ ವಿಶ್ವಕಪ್ ಗೆದ್ದಾಗ ಪ್ರತಿಯೊಬ್ಬರು ಧೋನಿಯನ್ನು ಹೊಗಳಿದರು. ಯಾವುದೇ ಒಂದೇ ಪಂದ್ಯ ಸೋತರೂ ಟೀಕೆಗಳ ಸುರಿಮಳೆಯಾಗುತ್ತದೆ. ಶ್ರೇಷ್ಠ ನಾಯಕರಾದವರು ಪಂದ್ಯವನ್ನು ಸೋತ ಕೂಡಲೇ ಅವರು ಸಾಮರ್ಥ್ಯ ಕಳೆದುಕೊಂಡಿದ್ದಾರೆ ಎಂದರ್ಥವಲ್ಲ. ಮುಂದಿನ ಪಂದ್ಯಗಳಲ್ಲಿ ಜಯಗಳಿಸುತ್ತಾರೆ ಎನ್ನುವ ನಂಬಿಕೆಯಿರಬೇಕು ಎಂದು ಹೇಳಿದ್ದಾರೆ.

ಅದರಂತೆ, ಮೋದಿ ಕೂಡಾ ಪ್ರಭಾವಿ, ಸಶಕ್ತ ನಾಯಕ. ಈಗಾಗಲೇ ಹಲವು ಚುನಾವಣೆಗಳಲ್ಲಿ ಜಯಗಳಿಸಿ ತೋರಿಸಿದ್ದಾರೆ. ಸೋಲು ಗೆಲುವು ರಾಜಕಾರಣದಲ್ಲಿ ಸಾಮಾನ್ಯ. ಬಿಜೆಪಿಗೆ ಗೆಲ್ಲುವುದು ಹೇಗೆ ಎನ್ನುವುದು ಗೊತ್ತಿದೆ. ಕಳೆದ 1984ರಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿದ್ದ ನಾವು, ಇದೀಗ ಕೇಂದ್ರದಲ್ಲಿ ಸರಕಾರ ರಚನೆ ಮಾಡಿದ್ದೇವೆ ಎಂದು ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಿಕಾಂತ್ ಬಾಜ್‌ಪೈ ವಿವರಣೆ ನೀಡಿದ್ದಾರೆ.

Write A Comment