ರಾಷ್ಟ್ರೀಯ

ಹಿಂದೂ ಯುವತಿ ಜೊತೆ ಇಮಾಮ್ ಬುಖಾರಿ ಪುತ್ರನ ಮದುವೆ

Pinterest LinkedIn Tumblr

bukhariನವದೆಹಲಿ: ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹ್ಮದ್ ಬುಖಾರಿ ಅವರ ಪುತ್ರ ಶಾಬಾನ್ ಬುಖಾರಿ ಹಿಂದೂ ಯುವತಿ ಜೊತೆ ಮದುವೆಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಕಳೆದ ತಿಂಗಳಷ್ಟೇ ಇಂಗ್ಲಿಷ್ ಸೇರಿದಂತೆ ಹಲವು ದೈನಿಕಗಳು, ಶಾಬಾನ್ ಹಿಂದೂ ಯುವತಿ ಜೊತೆ ಮದುವೆಯಾಗಲಿದ್ದಾರೆ ಎಂಬ ಗುಮಾನಿ ವ್ಯಕ್ತಪಡಿಸಿ ವರದಿ ಮಾಡಿದ್ದವು. ಇದೀಗ ದೈನಿಕ್ ಜಾಗರಣ್ ವರದಿ ಪ್ರಕಾರ, ಗಾಜಿಯಾಬಾದ್‌ ನ ಹಿಂದೂ ಹುಡುಗಿ ಜೊತೆ ಶಾಬಾನ್ ಭಾನುವಾರ ಜಾಮಾ ಮಸೀದಿಯಲ್ಲಿ ವಿವಾಹವಾಗಿರುವುದಾಗಿ ವಿವರಿಸಿದೆ. ವಿವಾಹ ಸಂದರ್ಭದಲ್ಲಿ ಕುಟುಂಬದ ಕೆಲವೇ ಕೆಲವು ಮಂದಿ ಆತ್ಮೀಯರು ಮಾತ್ರ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಹಿಂದೂ ಯುವತಿ ಜೊತೆ ವಿವಾಹಕ್ಕೆ ಇಮಾಮ್ ಸಯ್ಯದ್ ಅಹ್ಮದ್ ಬುಖಾರಿ ತೀವ್ರ ಅಸಮಾಧಾನವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಆದರೆ ಯುವತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಒಪ್ಪಿದ್ದರಿಂದ ವಿವಾಹಕ್ಕೆ ಅನುಮತಿ ನೀಡಿರುವುದಾಗಿ ವರದಿ ಹೇಳಿದೆ.

ಶಾಬಾನ್‌ ಬುಖಾರಿ ಅವರು ಎವಿಟಿ ವಿಶ್ವವಿದ್ಯಾಲಯದ ಸಾಮಾಜಿಕ ಕಾರ್ಯ ಪದವೀಧರರಾಗಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಜಾಮಾ ಮಸೀದಿಯ ನಯೀಬ್‌ ಇಮಾಮ್‌ ಆಗಿ ಇವರ ಅಧಿಕೃತವಾಗಿ ಪದಗ್ರಹಣ ನೆರವೇರಿಸಲಾಗಿತ್ತು. ಹಾಗಾಗಿ ಮುಂದೆ ಇವರು ದೇಶದ ಅತ್ಯಂತ ದೊಡ್ಡ ಮಸೀದಿಗೆ, ತಮ್ಮ ತಂದೆಯ ಉತ್ತರಾಧಿಕಾರಿಯಾಗಲಿದ್ದಾರೆ.

Write A Comment