ಅಂತರಾಷ್ಟ್ರೀಯ

ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಮುಗಿಸಲು ಪಾಕ್ ಸಂಚು ! ಈ ವರದಿ ನೋಡಿ…

Pinterest LinkedIn Tumblr

dawood

ಇಸ್ಲಾಮಾಬಾದ್: ಸರಿಯಾಗಿ ಒಂದು ವರ್ಷದ ಹಿಂದಿನ ಘಟನೆ. 2014ರ ನವೆಂಬರ್ ತಿಂಗಳ ಮಧ್ಯ ಭಾಗದ ಸಮಯ. ಪಾಕಿಸ್ತಾನದ ಇಸ್ಲಾಮಾಬಾದ್ ನಗರದ ಬೌಬಾಮ್ ಪರ್ವತಕ್ಕೆ ಹೊಂದಿಕೊಂಡಂತಿರುವ ಅಪಾರ್ಟ್ ಮೆಂಟಿನ ಮನೆಯೊಂದರಿಂದ ಯಾರು ಹೊರಗೆ ಬರುತ್ತಾರೆ ಎಂದು ಪರೀಕ್ಷಿಸುವಂತೆ ಭಾರತೀಯ ದೂತನೊಬ್ಬನಿಗೆ ಸೂಚಿಸಲಾಗಿತ್ತು. ಅದರಂತೆ ಆ ಭಾರತೀಯ ವ್ಯಕ್ತಿ ಗುಪ್ತವಾಗಿ ನೋಡುತ್ತಿರುವಾಗ ಒಬ್ಬ ವ್ಯಕ್ತಿ ಮನೆಯಿಂದ ಹೊರಬಂದು ತನ್ನ ಬೆಂಗಾವಲು ವಾಹನದಲ್ಲಿ ಹೊರಹೋಗುತ್ತಿರುವುದನ್ನು ಕಂಡ. ಇದು ಪಾಕಿಸ್ತಾನದ ಐಎಸ್ ಐ ಒಡೆತನದ ಅದರ ಸುರಕ್ಷತೆಗೆ ಬಳಸಿಕೊಳ್ಳುತ್ತಿದ್ದ ಮನೆಯಾಗಿತ್ತು. ಆ ಮನೆಯಿಂದ ಹೊರಬಂದ ವ್ಯಕ್ತಿ ಬೇರೆ ಯಾರೂ ಅಲ್ಲ, ಭಾರತಕ್ಕೆ ಬೇಕಾಗಿರುವ ಭೂಗತ ದೊರೆ ದಾವೂದ್ ಇಬ್ರಾಹಿಂ.

ಮುಂದೆ ಎರಡು ತಿಂಗಳು ಐಎಸ್ ಐನ ಸುರಕ್ಷಿತ ಮನೆಯೊಳಗೆ ಗೂಢಚಾರರು ವ್ಯಾಪಕ ಸ್ಥಳ ಪರಿಶೀಲನೆ ನಡೆಸಿದರು. ಆ ಮನೆಗೆ ಸುಲಭವಾಗಿ ಸಂಪರ್ಕವನ್ನು ಹೊಂದಿರುವ ರಸ್ತೆ, ಪ್ರವೇಶ ದ್ವಾರ, ಬೇಲಿಯ ಎತ್ತರ, ಭದ್ರತಾ ಪಡೆಗಳು, ಅಪಾರ್ಟ್ ಮೆಂಟಿಗೆ ಬಂದು ಹೋಗುವ ವಾಹನಗಳ ದಾಖಲಾತಿ ಸಂಖ್ಯೆ ಪ್ರತಿಯೊಂದನ್ನೂ ಗೂಢಚಾರರು ಗಮನಿಸುತ್ತಿದ್ದರು. ಅಪಾರ್ಟ್ ಮೆಂಟಿನಲ್ಲಿ ವಾಸಿಸುತ್ತಿರುವವರ ದೂರವಾಣಿ ಮತ್ತು ಮೊಬೈಲ್ ಸಂಖ್ಯೆಗಳನ್ನು ತಪಾಸಣೆ ಮಾಡಲಾಯಿತು.

ಭಾರತದಲ್ಲಿರುವ ತಾಂತ್ರಿಕ ತಂಡವೊಂದು ದೂರವಾಣಿ ಕರೆಗಳನ್ನು ಆಲಿಸಿ ವಿವರಗಳನ್ನು ಕಲೆ ಹಾಕಿದೆ. ಅದರಲ್ಲಿ ತಿಳಿದುಬಂದ ಅಂಶವೇನೆಂದರೆ ಕಳೆದ ಎರಡು ದಶಕಗಳಿಂದ ಪಾಲನೆ ಮಾಡಿಕೊಂಡು ಬಂದಿದ್ದ ಐಎಸ್ಐ ಇದೀಗ ದಾವೂದ್ ಇಬ್ರಾಹಿಂನನ್ನು ಮುಗಿಸಲು ಸಂಚು ರೂಪಿಸುತ್ತಿದೆ. ಒಂದು ವೇಳೆ ಭಾರತ ದಾವೂದ್ ನನ್ನು ಜೀವಂತವಾಗಿ ಹಿಡಿದರೆ ನೆರೆ ದೇಶವಾದ ಪಾಕಿಸ್ತಾನದ ಇನ್ನೊಂದು ಮುಖವಾಡ ಬಯಲಾಗುತ್ತದೆ. ಒಂದು ಸಮಯದಲ್ಲಿ ಮುಂಬೈ ಭೂಗತ ಲೋಕವನ್ನು ಆಳಿದ್ದ ಮತ್ತು ದಾವೂದ್ ನ ಮಿತ್ರನಾಗಿದ್ದು, ಈಗ ಶತ್ರುವಾಗಿರುವ ಛೋಟಾ ರಾಜನ್ ನ ಬಂಧನ ಕೂಡ ದಾವೂದ್ ನ ಮುಂದಿನ ಚಟುವಟಿಕೆಗಳಿಗೆ ಮತ್ತು ಜೀವಕ್ಕೆ ಅಪಾಯವಾಗಿದೆ.ಐಎಸ್ ಐ ಆತನನ್ನು ದೂರವಿಡಲು ನೋಡುತ್ತಿದೆ ಎಂಬುದು ಗೊತ್ತಾಗಿದೆ.

ದಾವೂದ್ ನನ್ನು ಜೀವಂತ ಬಿಟ್ಟರೆ ಮುಂದೊಂದು ದಿನ ಭಾರತ ಆತನನ್ನು ಬಂಧಿಸಿದರೆ ಭಾರತದಲ್ಲಿ ಐಎಸ್ ಐಯ ಭಯೋತ್ಪಾದನೆಯ ಪಾತ್ರ ಬಯಲಾಗುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಬಣ್ಣವೂ ಬಯಲಾಗುತ್ತದೆ.

Write A Comment