ರಾಷ್ಟ್ರೀಯ

ಬಿಹಾರದ ಗದ್ದುಗೆಯತ್ತ ಮಹಾಮೈತ್ರಿ ಕೂಟ; ಮತ್ತೆ ಸಿಎಂ ಗಾದಿ ಹಿಡಿಯಲು ಮುಂದಾಗಿರುವ ನಿತೀಶ್ ಕುಮಾರ್

Pinterest LinkedIn Tumblr

lalu-nitish

ಪಾಟ್ನ: ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದ್ದು, ಮಹಾಮೈತ್ರಿ ಕೂಟವು ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಇಂದು ನಡೆಯುತ್ತಿರುವ ಮತದಾನ ಎಣಿಕೆ ಪ್ರಕ್ರಿಯೆಯು ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದ್ದು, ಜೆಡಿಯು-ಬಿಜೆಪಿ ನಡುವೆ ಜಟಾಪಟಿ ಆರಂಭವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಿಹಾರ ಗದ್ದುಗೆ ಯಾರಿಗೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

ಪ್ರಸ್ತುತ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಜೆಡಿಯು ಹಾಗೂ ಅದರ ಮಿತ್ರ ಪಕ್ಷಗಳು 146 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು 90 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದೆ. ಇನ್ನುಳಿದಂತೆ ಇತರ ಪಕ್ಷಗಳು 7 ಸ್ಥಾನಗಳನ್ನು ಪಡೆದುಕೊಂಡಿದೆ.

ಮಹಾ ಮೈತ್ರಿಕೂಟ ಮುನ್ನಡೆ ಸಾಧಿಸಿರುವ ಸ್ಥಾನಗಳು: 154 (ಜೆಡಿಯು– 68, ಆರ್’ಜೆಡಿ – 70, ಕಾಂಗ್ರೆಸ್ -15, ಇತರೆ -7)

ಎನ್ ಡಿ ಎ ಮುನ್ನಡೆ ಸಾಧಿಸಿರುವ ಸ್ಥಾನಗಳು: 83 (ಬಿಜೆಪಿ– 68, ಎಲ್’ಜೆಪಿ – 9, ಹೆಚ್ಎಎಂ – 3, ಆರ್’ಎಲ್ಎಸ್’ಪಿ – 4)
ಇತರರು: 7

Write A Comment