ಪಾಟ್ನಾ: ಬಿಹಾರ್ ಸಿಎಂ ನಿತೀಶ್ ಕುಮಾರ್ ಮಂತ್ರವಾದಿಯನ್ನು ಭೇಟಿ ಮಾಡಿದ ವಿಡಿಯೋ ಬಿಡುಗಡೆ ಮಾಡಿದ್ದ ಬಿಜೆಪಿಗೆ, ಪ್ರಧಾನಿ ಮೋದಿ ಅವರು ಸ್ವಯಂ ಘೋಷಿತ ದೇವಮಾನವ,ಅತ್ಯಾಚಾರ ಆರೋಪಿ ಆಸಾರಾಮ್ ಬಾಪು ಜತೆಗಿರುವ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಜೆಡಿಯು ಪ್ರತಿ ಏಟು ನೀಡಿದೆ.
ನಿತೀಶ್ ಕುಮಾರ್ ತಾಂತ್ರಿಕನ ಜತೆ ಇದ್ದ ವೀಡಿಯೋವೊಂದನ್ನು ಬಿಡುಗಡೆ ಮಾಡಿ ಜೆಡಿಯು- ಆರ್‌ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟದ ಮೇಲೆ ಬಿಜೆಪಿ ದಾಳಿ ಮಾಡಿತ್ತು.
ಈಗ ಮೋದಿ ಹಾಗೂ ಅಸಾರಾಮ್ ಬಾಪು ಆತ್ಮೀಯತೆಯಿಂದಿರುವ ಬಿಡುಗಡೆ ಮಾಡಿರುವ ಜೆಡಿ(ಯು) ಅತ್ಯಾಚಾರಿ ಆರೋಪಿ ಜತೆ ಪ್ರಧಾನಿಗೇನು ಕೆಲಸ ಎಂದು ಪ್ರಶ್ನಿಸಿದೆ.
ನಿತೀಶ್ ಅವರು ತಾಂತ್ರಿಕನನ್ನು ಭೇಟಿ ಮಾಡಿದ್ದನ್ನು ದೊಡ್ಡ ವಿಷವನ್ನಾಗಿಸಿ ವಿವಾದ ಸೃಷ್ಟಿಸಿದ್ದ ಬಿಜೆಪಿ, ಮೋದಿ ಅತ್ಯಾಚಾರ ಆರೋಪಿ ಅಸಾರಾಂ ಬಾಪು ಅವರನ್ನು ಭೇಟಿ ಮಾಡಿದ್ದನ್ನು ಕಂಡು ಮೌನಕ್ಕೆ ಶರಣಾಗಿರುವುದು ಏಕೆ ಎಂದು ಜೆಡಿಯು ವಕ್ತಾರ ಸಂಜಯ್ ಸಿಂಗ್ ಸವಾಲೆಸೆದಿದ್ದಾರೆ.