ರಾಷ್ಟ್ರೀಯ

ಇಷ್ಟಕ್ಕೆ ವಿರುದ್ಧವಾದ ಮದುವೆ: ಪತಿಯ ಗುಪ್ತಾಂಗವನ್ನೇ ಸುಟ್ಟ ಪತ್ನಿ

Pinterest LinkedIn Tumblr

patiರೈಸನ್(ಮಧ್ಯಪ್ರದೇಶ: ಆಘಾತಕಾರಿ ಘಟನೆಯೊಂದರಲ್ಲಿ ತನ್ನ ಇಷ್ಟಕ್ಕೆ ವಿರುದ್ಧವಾಗಿ ವಿವಾಹ ನಡೆದಿದೆ ಎಂದು ಅಸಮಧಾನಗೊಂಡಿದ್ದ ಪತ್ನಿಯೊಬ್ಬಳು, ತನ್ನ ಪತಿಯ ಗುಪ್ತಾಂಗವನ್ನೇ ಸುಟ್ಟ ಘಟನೆ ಸಿರ್‌ಸೌದಾ ಗ್ರಾಮದಲ್ಲಿ ನಡೆದಿದೆ.

25 ವರ್ಷ ವಯಸ್ಸಿನ ಪತಿ ರಾಮ್ ದಯಾಳ್ ಆಹಿರ್ವಾರ್ ನಿದ್ರೆಯಲ್ಲಿದ್ದಾಗ ಪತ್ನಿ ಸಂಧ್ಯಾ, ಆತನ ಗುಪ್ತಾಗದ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಕಿಯ ಶಾಖದಿಂದ ಎಚ್ಚರಗೊಂಡ ಪತಿ ರಾಮ್‌ದಯಾಳ್ ಕೂಗಿಕೊಳ್ಳುವ ಮುನ್ನವೇ ಪತ್ನಿ ಸಂಧ್ಯಾ, ಆತನ ಮುಖದ ಮೇಲೆ ಕೂಡಾ ಸೀಮೆ ಎಣ್ಣೆ ಎರಚಿದಾಗ ಬೆಂಕಿ ಹೊತ್ತಿಕೊಂಡಿದೆ. ನಂತರ, ರಾಮ್‌ದಯಾಳ್ ಜೋರಾಗಿ ಕೂಗಿದಾಗ ಆತನ ಧ್ವನಿ ಕೇಳಿದ ಕುಟುಂಬದ ಸದಸ್ಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪತಿ ರಾಮ್‌ದಯಾಳ್ ಬೇಗಮ್‌ಗಂಜ್ ನಿವಾಸಿಯಾದ ಸಂಧ್ಯಾಳನ್ನು ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದನು. ಆದರೆ, ಪತಿ ನನಗೆ ಇಷ್ಟವಿಲ್ಲ ಎಂದು ಹೇಳಿ ಸಂಧ್ಯಾ ತನ್ನ ತವರು ಮನೆಯಲ್ಲಿಯೇ ವಾಸವಾಗಿದ್ದಳು ಎನ್ನಲಾಗಿದೆ.

ಇತ್ತೀಚೆಗೆ ಉಭಯ ಕುಟುಂಬಗಳ ಸದಸ್ಯರು ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಸಂಧ್ಯಾ ತನ್ನ ಪತಿಯೊಂದಿಗೆ ವಾಸಿಸಲು ಆರಂಭಿಸಿದ್ದಳು. ವಿವಾಹದಿಂದ ಅಸಮಧಾನಗೊಂಡಿದ್ದ ಸಂಧ್ಯಾ, ಪತಿಯಿಂದ ದೂರವಾಗುವ ನಿರ್ಧಾರದಿಂದ ಪತಿಯ ಗುಪ್ತಾಂಗವನ್ನು ಸುಟ್ಟುಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ರಾಮ್‌ದಯಾಳ್ ಚೌಕಿ ಪೊಲೀಸ್ ಠಾಣೆಯಲ್ಲಿ ಪತ್ನಿ ಸಂಧ್ಯಾಳ ವಿರುದ್ಧ ದೂರು ನೀಡಿದ್ದು, ದೂರಿನ ವಿಚಾರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Write A Comment