ರಾಷ್ಟ್ರೀಯ

ಪ್ರಧಾನಿ ಮೋದಿ ಕಾರ್ಯಾಲಯ ಹಿಂದೆಂದಿಗಿಂತಲೂ ದುರ್ಬಲ: ಅರುಣ್ ಶೌರಿ

Pinterest LinkedIn Tumblr

arun-shourieನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ನಾಯಕ ಅರುಣ್ ಶೌರಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರನ್ನು ಪರೋಕ್ಷ ಗುರಿಯಾಗಿರಿಸಿಕೊಂಡು ಮಾತನಾಡಿರುವ ಶೌರಿ, ಆರ್ಥಿಕ ನಿರ್ವಹಣೆ ಎಂದರೆ ಮಾಧ್ಯಮಗಳಲ್ಲಿ ಶೀರ್ಷಿಗಳನ್ನು ನಿರ್ವಹಣೆ ಮಾಡಿದಂತೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ ಎಂದಿದ್ದಾರೆ.

ಮೋದಿ ಸರ್ಕಾರದ ಆಡಳಿತ ದೇಶದ ಜನರಿಗೆ ಹಿಂದಿನ ಮನಮೋಹನ್ ಸಿಂಗ್ ಸರ್ಕಾರದ ದಿನಗಳನ್ನೇ ನೆನಪಿಸುವಂತಿದ್ದು, ಇಂದಿನ ಸರ್ಕಾರದ ನೀತಿಗಳು ಕಾಂಗ್ರೆಸ್

ನೀತಿಗಳನ್ನೇ ಅನುಸರಿಸುತ್ತಿದ್ದು ಜೊತೆಗೆ ಹಸುವನ್ನು ಸೇರಿಸಿಕೊಂಡಂತಿದೆ ಎಂದು ಶೌರಿ ವ್ಯಂಗ್ಯವಾಡಿದ್ದಾರೆ.

ನವದೆಹಲಿಯಲ್ಲಿ ನಡೆದ ಟರ್ನ್ ಆಫ್ ಟಾರ್ಟಾಯ್ಸ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅರುಣ್ ಶೌರಿ, ಹಿಂದಿನ ಸರ್ಕಾರಕ್ಕೂ, ಇಂದಿನ ಸರ್ಕಾರಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಹೇಳಿದ್ದು, ಇಂದಿನ ಸರ್ಕಾರ  ಆರ್ಥಿಕ ನಿರ್ವಹಣೆ ಎಂದರೆ ಮಾಧ್ಯಮಗಳಲ್ಲಿ ಶೀರ್ಷಿಗಳನ್ನು ನಿರ್ವಹಣೆ ಎಂದು ಭಾವಿಸಿರುವುದು ಸ್ಪಷ್ಟವಾಗಿದೆ, ಇದು ಹೀಗೆ ಮುಂದುವರೆದರೆ ಯಾವುದೇ ಉಪಯೋಗವಿಲ್ಲ ಎಂದಿದ್ದಾರೆ.

ಪ್ರಸ್ತುತ ಇರುವಷ್ಟು ದುರ್ಬಲ ಪ್ರಧಾನಿ ಕಾರ್ಯಾಲಯವನ್ನು ಹಿಂದೆಂದೂ ನೋಡಿರಲಿಲ್ಲ, ತೆರಿಗೆ ಆಡಳಿತದಲ್ಲಿ ಅಡಚಣೆ ಉಂಟಾಗುತ್ತಿದ್ದರೆ ವಾಸ್ತವವಾಗಿ ಬದಲಾವಣೆಯಾಗಿಲ್ಲ. ಬ್ಯಾಂಕಿಂಗ್ ಸುಧಾರಣೆಗಳನ್ನು ಕಾರಣವೇ ಇಲ್ಲದೇ ಒಂದು ವರ್ಷ ತಡಮಾಡಲಾಗಿದೆ. ಉದ್ಯಮಿಗಳು ಸರ್ಕಾರದ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ. ಪ್ರಧಾನಿಯನ್ನು ಭೇಟಿ ಮಾಡುವ ಉದ್ಯಮಿಗಳು ಸತ್ಯ ಹೇಳುತ್ತಿಲ್ಲ. ಪ್ರಧಾನಿಯನ್ನು ಭೇಟಿ ಮಾಡಿದ ಬಳಿಕ ಏನು ನಡೆಯುತ್ತಿದೆ ಎಂಬ ಗೊಂದಲದಲ್ಲಿರುತ್ತಾರೆ. ಮಾಧ್ಯಮಗಳ ಮುಂದೆ ಬಂದು ಸರ್ಕಾರಕ್ಕೆ 10 ಕ್ಕೆ 9 ಅಂಕ ನೀಡುತ್ತಾರೆ ಎಂದು ಶೌರಿ ಹೇಳಿದ್ದಾರೆ.

Write A Comment