ರಾಷ್ಟ್ರೀಯ

ಅತ್ಯಾಚಾರಿಗಳ ಪುರುಷತ್ವ ಹರಣ ಕಾನೂನು ಜಾರಿಗೆ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

Pinterest LinkedIn Tumblr

highಚೆನ್ನೈ,: ಇತ್ತೀಚೆಗೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಆರೋಪಿಗಳಿಗೆ ಪುರುಷತ್ವ ಹರಣ ಶಿಕ್ಷೆಯಂತಹ ಕಠಿಣ ಕಾನೂನು ಜಾರಿಗೊಳಿಸಿ ಎಂದು ಮದ್ರಾಸ್ ಹೈಕೋರ್ಟ್ ಇಂದು ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಹೌದು, ಮದ್ರಾಸ್ ಹೈಕೋರ್ಟ್‌ನ ನ್ಯಾಯಾಮೂರ್ತಿ ಎನ್.ಕಿರುಬಾಕರನ್ ಅವರಿದ್ದ ಏಕ ಸದಸ್ಯ ಪೀಠ ಸರ್ಕಾರಕ್ಕೆ ಈ ನೋಟಿಸ್‌ನ್ನು ಜಾರಿಗೊಳಿಸಿದ್ದು, ದೇಶದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಅಂದರೆ ದೇಶದಲ್ಲಿರುವ ದುರ್ಬಲ ಕಾನೂನುಗಳೇ ಇದಕ್ಕೆ ಕಾರಣವಾಗಿದ್ದು, ಆಱೋಪಿಗಳಿಗೆ ರಕ್ಷಣೆ ಸಿಗುತ್ತಿದೆ. ಹಾಗಾಗಿ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅತೀ ಕಠಿಣವಾದ ಕಾನೂನು ಜಾರಿಗೊಳಿಸುವ ಅಗತ್ಯವಿದ್ದು, ಪುರುಷತ್ವ ಹರಣ ಶಿಕ್ಷೆ ವಿಧುಸುವಂತಹ ಕಠಿಣ ಕಾನೂನು ಜಾರಿಗೊಳಿಸಬೇಕಿದೆ ಎಂಬುದಾಗಿ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಇಂತಹ ಹೇಯ ಪ್ರಕರಣಗಳು ದೇಶದೆಲ್ಲೆಡೆ ನಡೆಯುತ್ತಿದ್ದು, ಕೋರ್ಟ್ ಸುಮ್ಮನೆ ಕೂರಲು ಸಾಧ್ಯವಿಲ್ಲ. ಈಗಾಗಲೇ ಪ್ರಪಂಚದ ರಾಷ್ಟ್ರಘಳಾದ ರಷ್ಯಾ, ಪೋಲೆಂಡ್ ಮತ್ತು ಅಮೇರಿಕಾದ 9 ರಾಜ್ಯಗಳು ಸೇರಿದಂತೆ ಇತರೆ ದೇಶಗಳು ಇಂತಹ ಕಠಿಣ ಕಾನೂನನನ್ನು ಜಾರಿಗೊಳಿಸಿವೆ. ಈ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರದಲ್ಲಿಯೂ ಕೂಡ ಅಂತಹ ಕಾನೂನು ಅಗತ್ಯ ಎಂಬ ಅಭಿಪ್ರಾಯವನ್ನು ಹೊರಹಾಕಿದೆ.

ಇನ್ನು 15 ವರ್ಷದ ಬಾಲಕನೋರ್ವನ ಮೇಲೆ ಅತ್ಯಾಚಾರ ಎಸಗಿದ್ದ ಬ್ರಿಟೀಷ್ ಪ್ರಜೆಯೋರ್ವ ಬಾಲಕನ ವಿದ್ಯಾಭ್ಯಾಸದ ಎಲ್ಲಾ ಜವಾಬ್ದಾರಿ ವಹಿಸಿಕೊಂಡು ಪರಿಹಾರವನ್ನೂ ನೀಡುವುದಾಗಿ ಕೋರ್ಟ್‌ನಲ್ಲಿಯೇ ಒಪ್ಪಿಕೊಂಡಿದ್ದ. ಆದರೆ ಪ್ರಸ್ತುತ ಪರಾರಿಯಾಗಿದ್ದು, ಈ ಸಂಬಂಧ ಬಾಲಕನ ಪೋಷಕರು ಕೋರ್ಟ್‌ನಲ್ಲಿ ಮತ್ತೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಯಲಯ, ಸರ್ಕಾರಕ್ಕೆ ಈ ರೀತಿಯ ನೋಟಿಸ್ ಜಾರಿಗೊಳಿಸಿದೆ.

Write A Comment