ರಾಷ್ಟ್ರೀಯ

ಲಾಲು- ನಿತೀಶ್‌ಗೆ ಆನೆಬಲ: ಮಾಜಿ ಕೇಂದ್ರ ಸಚಿವ ನಾಗಮಣಿ ಬೆಂಬಲ

Pinterest LinkedIn Tumblr

laluಪಾಟ್ನಾ,: ತೃತೀಯ ರಂಗದಿಂದ ಎನ್‌ಸಿಪಿ ಹೊರಬಂದ ಹತ್ತು ದಿನಗಳಲ್ಲಿಯೇ ಸಮರಸ ಸಮಾಜ ಪಕ್ಷದ ಮುಖ್ಯಸ್ಥ,  ಪ್ರಬಲ ಖುಶ್ವಾಹ ಸಮಾಜದ ಮುಖಂಡ ನಾಗಮಣಿ, ಬಿಹಾರ್ ಸಿಎಂ ನಿತೀಶ್ ಕುಮಾರ್‌ಗೆ ಬೆಂಬಲ ಸೂಚಿಸಿದ್ದಾರೆ.

ಬಿಹಾರ್ ರಾಜ್ಯದಲ್ಲಿ ತೃತೀಯ ರಂಗ ವಿಫಲವಾಗಿದೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಜನಾಧಿಕಾರ ಪಕ್ಷದ ಮುಖ್ಯಸ್ಥ ಪಪ್ಪು ಯಾದವ್, ಬಿಜೆಪಿ ಏಜೆಂಟ್‌ರಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ತೃತೀಯ ರಂಗ ತೊರೆದು ನಿತೀಶ್ ಕುಮಾರ್‌ ಮೈತ್ರಿಕೂಟಕ್ಕೆ ಬೆಂಬಲ ನೀಡಲು ನಿರ್ಧರಿಸಲಾಯಿತು ಎಂದು ಮಾಜಿ ಕೇಂದ್ರ ಸಚಿವ ನಾಗಮಣಿ ತಿಳಿಸಿದ್ದಾರೆ

ತೃತೀಯ ರಂಗದಲ್ಲಿದ್ದ ಆರು ಪಕ್ಷಗಳಲ್ಲಿ ಎಸ್‌ಎಸ್‌ಪಿ ಪಕ್ಷವು ಒಂದಾಗಿತ್ತು. ಎರಡನೇ ಹಂತದ ಚುನಾವಣೆಗೆ ಒಂದು ದಿನ ಮುಂಚೆ ಮುಲಾಯಂ ಸಿಂಗ್ ಯಾದವ್ ಬಿಜೆಪಿ ಪರ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಎನ್‌ಸಿಪಿ ತೃತೀಯ ರಂಗಕ್ಕೆ ಗುಡ್‌ಬೈ ಹೇಳಿತ್ತು.

ಬಿಹಾರ್ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಲು ನಿರ್ಧರಿಸಲಾಯಿತು. ನಮ್ಮ ಪಕ್ಷದ ಬೆಂಬಲಿಗರು ಮತ್ತು ಖುಶ್ವಾಹ ಸಮುದಾಯದವರು ಜನತಾ ಪರಿವಾರಕ್ಕೆ ಮತ ಹಾಕಬೇಕು ಎಂದು ನಾಗಮಣಿ ಕರೆ ನೀಡಿದರು.

ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟ ಬಹುಮತ ಪಡೆಯಲಿದೆ ಎಂದು ಮಾಜಿ ಕೇಂದ್ರ ಸಚಿವ ನಾಗಮಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Write A Comment