ರಾಷ್ಟ್ರೀಯ

ದೆಹಲಿಯಲ್ಲಿ ಕಾರ್ ಫ್ರೀ ಡೇ: ಸೈಕಲ್‌ನಲ್ಲಿ ಹೊರಟ ದೆಹಲಿ ಸಿಎಂ ಕೇಜ್ರಿವಾಲ್

Pinterest LinkedIn Tumblr

kejನವದೆಹಲಿ: ದೆಹಲಿಯಲ್ಲಿ ಮೊದಲ ಬಾರಿಗೆ ಆಯೋಜಿಸಿದ ಕಾರ್ ಫ್ರೀ ಡೇ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸೈಕಲ್ ರ್ಯಾಲಿ ಹಮ್ಮಿಕೊಂಡಿದ್ದು ಸಂಚಾರವನ್ನು ಮತ್ತಷ್ಟು ಸುರಕ್ಷಿತಗೊಳಿಸಬೇಕಾಗಿದೆ ಎಂದರು.

ಕೇಜ್ರಿವಾಲ್ ಜೊತೆಯಲ್ಲಿ ಕೈ ಜೋಡಿಸಿದ 100 ಸೈಕಲ್ ಸವಾರರು ಹಳೆ ದೆಹಲಿಯ ರೆಡ್‌ಫೋರ್ಟ್‌ನಿಂದ ಇಂಡಿಯಾ ಗೇಟ್‌ವರೆಗೆ ಸೈಕಲ್ ಜಾಥಾದಲ್ಲಿ ತೆರಳಿದರು. ಕೇಜ್ರಿವಾಲ್ ಅವರೊಂದಿಗೆ ಸಚಿವರು ಹಾಗೂ ಇತರ ಅಧಿಕಾರಿ ವರ್ಗದವರು ಹಾಜರಿದ್ದರು.

ದೆಹಲಿ ರಸ್ತೆಗಳಲ್ಲಿರುವ ಅವ್ಯವಸ್ಥೆಯಿಂದಾಗಿ ನಗರದಲ್ಲಿ ಮಾಲಿನ್ಯ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಸುಧಾರಣೆಗೆ ಜನತೆ ಒಂದು ಹೆಜ್ಜೆ ಮುಂದಿಡಬೇಕು ಎಂದು ಕರೆ ನೀಡಿದರು.

ದೆಹಲಿಯಲ್ಲಿ ಪ್ರತಿನಿತ್ಯ 84 ಲಕ್ಷ ವಾಹನಗಳು ಸಂಚರಿಸುತ್ತಿರುವುದರಿಂದ ಸಂಚಾರಿ ವ್ಯವಸ್ಥೆ ಮತ್ತು ಉತ್ತಮ ಗುಣಮಟ್ಟದ ಗಾಳಿಯನ್ನು ಕಲುಷಿತಗೊಳಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸೈಕಲ್ ನಡೆಸುವುದರಿಂದ ಹಲವು ರೋಗಗಳನ್ನು ದೂರವಾಗಿರಿಸಬಹುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಸೈಕಲ್ ಜಾಥಾದಲ್ಲಿ ತೆರಳುತ್ತಿದ್ದ ದೆಹಲಿ ನಾಗರಿಕ ಪುನೀತ್, ದೆಹಲಿ ಸರಕಾರ ಕಾರ್ ಫ್ರೀ ಡೇ ಆಚರಿಸುತ್ತಿರುವುದು ಶ್ಲಾಘನೀಯ. ರವಿವಾರದಂದು ಕೂಡಾ ಕಾರ್ ಫ್ರೀ ಡೇ ಆಚರಿಸುವುದು ಸೂಕ್ತ ಎಂದು ದೆಹಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

Write A Comment