ರಾಷ್ಟ್ರೀಯ

ಗಡಿಯಲ್ಲಿ ಗುಂಡಿನ ಚಕಮಕಿ: ಉಗ್ರನ ಹತ್ಯೆ, ಇಬ್ಬರು ಯೋಧರಿಗೆ ಗಾಯ

Pinterest LinkedIn Tumblr

sriಶ್ರೀನಗರ: ಭಾರತೀಯ ಗಡಿ ಭದ್ರತಾ ಯೋಧರು ಮತ್ತು ಉಗ್ರರ ನಡುವೆ ಬುಧವಾರ ಮುಂಜಾನೆ ಕಾಶ್ಮೀರ- ಪಾಕ್ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇಬ್ಬರು ಭಾರತೀಯ ಯೋಧರು ಗಾಯಗೊಂಡಿದ್ದಾರೆ.

ಉತ್ತರ ಕಾಶ್ಮೀರದ ತಂಗ್​ವಾರ್ಗ್​ನ ಕುಂಝುರ್​ನಲ್ಲಿ ಉಗ್ರರು ನುಸುಳಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಯೋಧರು ಮುಂಜಾನೆ 7. 45ಕ್ಕೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಉಗ್ರನೊಬ್ಬ ಹತ್ಯೆಯಾಗಿದ್ದಾನೆ. ಗಾಯಗೊಂಡಿರುವ ಯೋಧರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಮತ್ತೆ ಕೆಲವು ಉಗ್ರರು ಸ್ಥಳದಲ್ಲಿ ಅಡಗಿರುವ ಶಂಕೆ ಇದ್ದು ಯೋಧರು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.

Write A Comment