ರಾಷ್ಟ್ರೀಯ

ಮೋದಿಯನ್ನು ರಾವಣನಿಗೆ ಹೋಲಿಸಿದ ಲಾಲು

Pinterest LinkedIn Tumblr

laluಪಟ್ನಾ: ಬಿಹಾರ್ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸದಾ ವಿವಾದಗಳಿಂದಲೇ ಗುರುತಿಸಿಕೊಳ್ಳುವವರು. ಅದರಲ್ಲೂ ಪ್ರಧಾನಿ ಮೋದಿಯನ್ನು ಬಾಯಿಗೆ ಬಂದ ಪದಗಳಿಂದ ಅವಹೇಳನ ಮಾಡುವ ಅವರು ಈ ಬಾರಿ ಮೋದಿಯವರನ್ನು ದಾನವ ರಾವಣನಿಗೆ ಹೋಲಿಸಿ ಮಾತನಾಡಿದ್ದಾರೆ.

ವೈಶಾಲಿ ಮತ್ತು ಸರಣ ಜಿಲ್ಲೆಗಳ ವಿವಿಧ ವಿಧಾನ ಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗುವ ಮುನ್ನ ಪಾಟ್ನಾದಲ್ಲಿ ಮಾತನಾಡುತ್ತಿದ್ದ ಲಾಲು, ‘ರಾಕ್ಷಸ ಸೈನ್ಯವನ್ನು ಸಂಹಾರ ಮಾಡಿದ ಸಂಭ್ರಮಕ್ಕಾಗಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ನಾವು ಇಂದಿನ ರಾವಣನನ್ನು ಕೊನೆಗಾಣಿಸುವ ಮೂಲಕ ಹಬ್ಬದ ಸ್ಪಷ್ಟ ಸಂದೇಶವನ್ನು ನೀಡಬೇಕಾಗಿದೆ. ವಿಜಯದಶಮಿ ದಿನದಂದು ರಾವಣನ ವಧೆಯಾದಂತೆ ಬಿಹಾರದಲ್ಲಿ ರಾಜಕೀಯ ರಾವಣನ ಸಂಹಾರವಾಗುತ್ತದೆ. ಈ ಮೂಲಕ ಬಿಹಾರದ ಚುನಾವಣೆಯಲ್ಲಿ ಕೋಮು ರಾಜಕೀಯದ ಅಂತ್ಯವಾಗಲಿದೆ ಎಂದು ಪ್ರಧಾನಿ ಮೋದಿ ಅವರನ್ನು ಗೇಲಿ ಮಾಡಿದ್ದಾರೆ.

ಕೋಮುವಾದವನ್ನು ಕೊನೆಗಾಣಿಸುವ ಮೂಲಕ ಮತ್ತು ಬಿಹಾರ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಸೋಲಿಸುವ ಮೂಲಕ ದುರ್ಗಾ ಪೂಜೆಯನ್ನು ಆಚರಿಸಿ ಎಂದು ರಾಷ್ಟ್ರೀಯ ಜನತಾ ದಳದ ನಾಯಕ, ಬಿಹಾರ್ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ತಮ್ಮ ರಾಜ್ಯದ ಜನತೆಗೆ ಕರೆ ಕೊಟ್ಟಿದ್ದಾರೆ

ಹಲವರು ಈಗಾಗಲೇ ಮತವನ್ನು ಚಲಾಯಿಸಿ ಆಗಿದೆ. ಮತ್ತೆ 3 ಹಂತಗಳ ಚುನಾವಣೆ ಬಾಕಿ ಉಳಿದಿದ್ದು ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಮತ ಚಲಾಯಿಸಬೇಕಿದೆ ಎಂದು ಲಾಲು ಹೇಳಿದ್ದಾರೆ.

ಬಿಹಾರ್ ವಿಧಾನಸಭೆಗೆ 5 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಅಕ್ಟೋಬರ್ 28 ರಂದು 3 ನೇ ಹಂತದ, ನವೆಂಬರ್ 1 ಮತ್ತು 5 ರಂದು ನಾಲ್ಕು ಮತ್ತು ಐದನೇ ಚುನಾವಣೆ ನಡೆಯುತ್ತಿದೆ.

Write A Comment