ರಾಷ್ಟ್ರೀಯ

ರಾಬರ್ಟ್ ವಾದ್ರಾ ನಮ್ಮ ಗುರಿಯಲ್ಲ: ಮನೋಹರ ಲಾಲ್ ಖಟ್ಟರ್

Pinterest LinkedIn Tumblr

katterನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ನಮ್ಮ ಸರ್ಕಾರದ ಟಾರ್ಗೆಟ್ ಅಲ್ಲ, ಯಾವುದೇ ಪೂರ್ವಾಗ್ರಹವಿಲ್ಲದೇ ಎಲ್ಲಾ ರಿಯಲ್ ಎಸ್ಟೇಟ್ ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸ್ಪಷ್ಟಪಡಿಸಿದ್ದಾರೆ.

ರಾಬರ್ಟ್ ವಾದ್ರಾ ಮಾಲೀಕತ್ವದ ಸ್ಕೈಲೈಟ್ ಹಾಸ್ಪಿಟಾಲಿಟಿ ಕಂಪನಿಗೆ ನೋಟಿಸ್ ಜಾರಿಗೊಳಿಸಿದುದರ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಟ್ಟರ್, ನಾವು ವಾದ್ರಾ ಅವರನ್ನು ಗುರಿಯಾಗಿಟ್ಟುಕೊಂಡಿಲ್ಲ. ನಮ್ಮ ಗುರಿ ಸತ್ಯವನ್ನು ತಿಳಿದುಕೊಳ್ಳುವುದಷ್ಟೇ ಎಂದು ಹೇಳಿದ್ದಾರೆ.

ಹರಿಯಾಣ ವ್ಯಾಟ್ ಕಾಯಿದೆಯ ಉಲ್ಲಂಘನೆ ಸ್ಕ್ಯಾನರ್ ಅಡಿಯಲ್ಲಿ ಹಲವು ಕಂಪನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಖಟ್ಟರ್ ತಿಳಿಸಿದ್ದಾರೆ.

“ಸ್ಕೈಲೈಟ್ ಹಾಸ್ಪಿಟಾಲಿಟಿಯೊಂದಕ್ಕೆ ನಾವು ನೋಟಿಸ್ ಜಾರಿ ಮಾಡಿಲ್ಲ. ನಿಯಮವನ್ನು ಉಲ್ಲಂಘಿಸಿರುವ ಎಲ್ಲ ಕಂಪನಿಗಳಿಗೆ ಸಹ ನಾವು ನೋಟಿಸ್ ಜಾರಿ ಮಾಡಿದ್ದೇವೆ”, ಎಂದು ಖಟ್ಟರ್ ಸ್ಪಷ್ಟ ಪಡಿಸಿದ್ದಾರೆ.

Write A Comment