ಹೊಸದಿಲ್ಲಿ, ಅ.9: ಮಕ್ಕಾದಲ್ಲಿ ಹಜ್ ಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತರಾದ ಭಾರತೀಯರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. ಈ ಮಧ್ಯೆ, ಇನ್ನೂ ಹಲವು ಮಂದಿ ಭಾರತೀಯರು ಈಗಲೂ ನಾಪತ್ತೆಯಾಗಿದ್ದಾರೆ.
ಹಜ್ ಕಾಲ್ತುಳಿತದಲ್ಲಿ ಮೃತಪಟ್ಟಿರುವ ಇನ್ನಷ್ಟು ಯಾತ್ರಿಕರನ್ನು ಸೌದಿ ಅರೇಬಿಯದ ಅಧಿಕಾರಿಗಳು ಗುರುತು ಪತ್ತೆ ಹಚ್ಚಿದ್ದಾರೆ. ಮೃತ ಭಾರತೀಯ ಯಾತ್ರಿಕರ ಸಂಖ್ಯೆ ಈಗ 101 ದಾಟಿದೆ.
ಇನ್ನೂ 32 ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡುತ್ತ ತಿಳಿಸಿದ್ದಾರೆ.