ರಾಷ್ಟ್ರೀಯ

ಬಿಹಾರ್ ಚುನಾವಣೆ: ರಾಘೋಪುರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಲಾಲು ಪುತ್ರ

Pinterest LinkedIn Tumblr

laluಪಾಟ್ನಾ: ಬಿಹಾರ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಘೋಪುರ್ ವಿಧಾನಸಭಾ ಕ್ಷೇತ್ರದಿಂದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ನಾಮಪತ್ರ ಸಲ್ಲಿಸಿದ್ದಾರೆ.

26 ವರ್ಷ ವಯಸ್ಸಿನ ತೇಜಸ್ವಿ ತಮ್ಮ ತಂದೆ ಲಾಲು ಪ್ರಸಾದ್ ಮತ್ತು ಸಹೋದರ ತೇಜ್ ಪ್ರತಾಪ್ ಹಾಗೂ ಇತರ ಆರ್‌ಜೆಡಿ ನಾಯಕರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ರಾಘೋಪುರ್ ವಿಧಾನಸಭೆ ಕ್ಷೇತ್ರ ನಮ್ಮ ಕುಟುಂಬದ ಪಾರಂಪರಿಕ ಕ್ಷೇತ್ರವಾಗಿದ್ದರಿಂದ ಜನತೆ ನಮಗೆ ಮತ ಹಾಕುವ ವಿಶ್ವಾಸವಿದೆ. ಚುನಾವಣೆಯಲ್ಲಿ ಗೆಲ್ಲುವ ಭರವಸೆಯಿದೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತೊಬ್ಬ ಪುತ್ರ ತೇಜ್ ಪ್ರತಾಪ್ ಯಾದವ್ ಮಹುವಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಮಹುವಾ ಮತ್ತು ರಾಘೋಪುರ್ ವಿಧಾನಸಭಾ ಕ್ಷೇತ್ರಗಳು ವೈಶಾಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾಗಿದ್ದು ಆರ್‌ಜೆಡಿ ಪಕ್ಷ ಬಲಾಢ್ಯ ಪ್ರದೇಶಗಳಾಗಿವೆ.

Write A Comment