ರಾಷ್ಟ್ರೀಯ

ಬಿಹಾರ್ ಚುನಾವಣೆ ಆಮಿಷ: ಬಿಜೆಪಿಗೆ ಮತ ಹಾಕಿ ಉಚಿತ ಸ್ಕೂಟಿ, ಪೆಟ್ರೋಲ್ ಪಡೆಯಿರಿ

Pinterest LinkedIn Tumblr

bjpಪಾಟ್ನಾ: ಬಿಹಾರ್ ಚುನಾವಣೆ ಪ್ರಚಾರದಲ್ಲಿ ಮತ್ತಷ್ಟು ರಂಗು ತುಂಬಲು ಬಿಜೆಪಿ ಹರಸಾಹಸ ನಡೆಸಿದೆ. ಇದೀಗ ಹತ್ತನೇ ಮತ್ತು ಪಿಯುಸಿ ತರಗತಿಯಲ್ಲಿ ಓದುತ್ತಿರುವ 5000 ಮೆರಿಟ್ ವಿದ್ಯಾರ್ಥಿನಿಯರಿಗೆ ಉಚಿತ ಪೆಟ್ರೋಲ್ (ಎರಡು ವರ್ಷಗಳವರೆಗೆ) ಹಾಗೂ ಸ್ಕೂಟಿ ನೀಡುವ ಆಮಿಷವೊಡ್ಡಿದೆ.

ಹತ್ತನೆ ಮತ್ತು ಪಿಯುಸಿ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ 5000 ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡಲಾಗುವುದು ಮತ್ತು ಎರಡು ವರ್ಷಗಳವರೆಗೆ ಉಚಿತ ಪೆಟ್ರೋಲ್ ಒದಗಿಸಲಾಗುವುದು ಎಂದು ಬಿಜೆಪಿ ಮುಖಂಡ ಸುಶೀಲ್ ಮೋದಿ ಹೇಳಿದ್ದಾರೆ.

ಬಿಜೆಪಿಯವರು ಸ್ಕೂಟಿ ವಾಹನ ನೀಡುತ್ತಿದ್ದಾರೆ. ಆದರೆ, ಪೆಟ್ರೋಲ್ ಯಾರಿಂದ ಪಡೆಯುತ್ತೀರಿ ಎನ್ನುವ ಬಿಹಾರ್ ಸಿಎಂ ನಿತೀಶ್ ಕುಮಾರ್ ಹೇಳಿಕೆಗೆ ಸುಶೀಲ್ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ವೇಳೆ. ನಾವು ಸ್ಕೂಟಿ ದ್ವಿಚಕ್ರ ವಾಹನ ನೀಡುವುದಾದರೆ ಪೆಟ್ರೋಲ್ ಕೂಡಾ ಉಚಿತವಾಗಿ ನೀಡುತ್ತೇವೆ. ಆದ್ದರಿಂದ ಬೇರೆಯವರು ಚಿಂತೆ ಮಾಡಬೇಕಾಗಿಲ್ಲ ಎಂದು ನಿತೀಶ್ ಕುಮಾರ್‌ಗೆ ತಿರುಗೇಟು ನೀಡಿದ್ದಾರೆ.

ಬಿಹಾರ್ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಸಂಪರ್ಕ ನೀಡಲಾಗುವುದು ಎಂದು ಮೋದಿ ಘೋಷಿಸಿದ್ದಾರೆ.

ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದಲ್ಲಿ ಸುಶೀಲ್ ಮೋದಿ ಮುಖ್ಯಮಂತ್ರಿ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬಿಹಾರ್ ಸಿಎಂ ನಿತೀಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ನಡೆದ 100 ಕೋಟಿ ರೂ ವೈದ್ಯಕೀಯ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗುವುದು ಎಂದು ಬಿಜೆಪಿ ಮುಖಂಡ ಸುಶೀಲ್ ಮೋದಿ ತಿಳಿಸಿದ್ದಾರೆ.

Write A Comment