ಅಂತರಾಷ್ಟ್ರೀಯ

ಇನ್ನು ಮುಂದೆ ಫೇಸ್ ಬುಕ್ ನಲ್ಲಿ ಪ್ರೊಫೈಲ್ ವಿಡಿಯೋ ಫೀಚರ್ ಹಾಕಬಹುದು !

Pinterest LinkedIn Tumblr

facebook

ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್ ಬುಕ್, ಶೀಘ್ರವೇ ಪ್ರೊಫೈಲ್ ವಿಡಿಯೋ ಎಂಬ ಫೀಚರ್ ನ್ನು ಬಿಡುಗಡೆ ಮಾಡಲಿದೆ.

ಮೊಬೈಲ್ ಆಪ್ ನಲ್ಲಿ ಈ ಫೀಚರ್ ಲಭ್ಯವಾಗಲಿದೆ ಎಂದು ಸಂಸ್ಥೆಯ ಅಧಿಕೃತ ಪ್ರಕಟಣೆ ತಿಳಿಸಿದೆ. ಫೇಸ್ ಬುಕ್ ನಲ್ಲಿ ವಿಡಿಯೋಗಳನ್ನು ಬಳಸುವ ಟ್ರೆಂಡ್ ಹೆಚ್ಚಾಗಿರುವುದರಿಂದ ಪ್ರೊಫೈಲ್ ವಿಡಿಯೋ ಎಂಬ ಫೀಚರ್ ನ್ನು ಬಿಡುಗಡೆ ಮಾಡಲು ಫೇಸ್ ಬುಕ್ ನಿರ್ಧರಿಸಿದೆ.

ಪ್ರೊಫೈಲ್ ವೀಕ್ಷಣೆಗೆ ನಿರ್ಬಂಧ ವಿಧಿಸಬಹುದಾದ ಸೌಲಭ್ಯ ಈಗಾಗಲೆ ಇದ್ದು, ಇದು ಪ್ರೊಫೈಲ್ ವಿಡಿಯೋಗೂ ಅನ್ವಯವಾಗಲಿದೆ. ವಿಡಿಯೋ ಅಪ್ ಡೇಟ್ ಮಾಡುವುದಕ್ಕೂ ಮುನ್ನ, ಬಳಕೆದಾರರ ಶಿಕ್ಷಣ ಹಾಗೂ ಕೆಲಸಕ್ಕೆ ಸಂಬಂಧಿಸಿದಂತೆ ಮಾಹಿತಿ ಬರೆಯುವ ಸೌಲಭ್ಯವನ್ನು ಕಲ್ಪಿಸಲಾಗಿದೆ.

Write A Comment