ರಾಷ್ಟ್ರೀಯ

ಮತದಾರರಿಗೆ ಆಮಿಷ ಸುಶೀಲ್ ಮೋದಿ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

sushil-fiಭಬುವಾ/ಪಾಟ್ನಾ, ಸೆ.29: ಬಿಹಾರದ ಚುನಾವಣಾ ರ್ಯಾಲಿಯೊಂದರಲ್ಲಿ ಮತದಾರರಿಗೆ ಲ್ಯಾಪ್‌ಟಾಪ್, ಬಣ್ಣದ ಟಿವಿಗಳು ಮತ್ತು ಸೀರೆ-ಪಂಚೆಗಳ ಆಮಿಷವೊಡ್ಡಿದ ಆರೋಪದ ಮೇಲೆ ಹಿರಿಯ ಬಿಜೆಪಿ ಧುರೀಣ ಸುಶೀಲ್‌ಕುಮಾರ್ ಮೋದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೋದಿ ವಿರುದ್ಧ ಭಬುವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಕೈಮುರ್ ಜಿಲ್ಲೆಯ ಎಸ್‌ಪಿ ಹರ್‌ಪ್ರೀತ್ ಸಿಂಗ್ ಹೇಳಿದ್ದಾರೆ. ಚುನಾವಣಾ ರ್ಯಾಲಿಯ ವಿಡಿಯೋ ದೃಶ್ಯಾವಳಿಯನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಆನಂದ್ ಭೂಷಣ್ ಪಾಂಡೆ ಎಂಬವರ ಪರವಾಗಿ ಸೋಮವಾರ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಮೋದಿ ಈ ಭರವಸೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿದೆ.ಈ ಮಧ್ಯೆ, ಮಂಗಳವಾರ ಪಾಟ್ನಾದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸುಶೀಲ್ ಮೋದಿ, ತನ್ನ ವಿರುದ್ಧ ಪ್ರಕರಣ ದಾಖಲು ಮಾಡಿರುವ ಪೊಲೀಸರ ಕ್ರಮವನ್ನು ಪ್ರಶ್ನಿಸಿದರು.

ಅಲ್ಲದೆ, ಚುನಾವಣಾ ಆಯೋಗವು ಇದನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದರು.ಬಿಹಾರದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ 50 ಸಾವಿರ ಬಾಲಕ-ಬಾಲಕಿಯರಿಗೆ ಲ್ಯಾಪ್‌ಟಾಪ್ ಹಾಗೂ ಬಣ್ಣದ ಟಿವಿ, ಧೋತಿ-ಸೀರೆ ಒದಗಿಸುವುದಾಗಿ ನಾನು ಹೇಳಿದ್ದೆ. ರಾಜ್ಯದ ಜನತೆಯ ಕುರಿತಂತೆ ಪಕ್ಷದ ಮುನ್ನೋಟವನ್ನು ನಾನು ವಿವರಿಸಿದ್ದೇನೆ. ಇದರಲ್ಲಿ ತಪ್ಪೇನೂ ಇಲ್ಲ ಎಂದು ಅವರು ಹೇಳಿದರು.ಚುನಾವಣೆಯ ನಂತರ ತಾವೇನು ಮಾಡುತ್ತೇವೆ ಎಂಬುದನ್ನು ಎಲ್ಲ ಪಕ್ಷಗಳೂ ಹೇಳಿಕೊಳ್ಳುತ್ತವೆ. ಇದರಲ್ಲಿ ತಪ್ಪೇನಿದೆ? ಎಂದು ಮೋದಿ ಪ್ರಶ್ನಿಸಿದರು.

Write A Comment