ರಾಷ್ಟ್ರೀಯ

ನ್ಯಾಯಾಧೀಶರ ಜೀವನ ದಯನೀಯವಾಗಿದೆ: ನ್ಯಾ.ದತ್ತು

Pinterest LinkedIn Tumblr

HLDattu-fiiiiಹೊಸದಿಲ್ಲಿ, ಸೆ.29: ನ್ಯಾಯಾಧೀಶರೊಬ್ಬರ ವಿರುದ್ಧ ಮತ್ತೆ ಮತ್ತೆ ಬೇನಾಮಿ ದೂರು ದಾಖಲಿಸುವುದು ಪ್ರತೀ ಹೈಕೋರ್ಟ್‌ನಲ್ಲಿ ಕೆಲವು ವಕೀಲರಿಗೆ ದೀರ್ಘಕಾಲದ ಅಭ್ಯಾಸವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ನೇತೃತ್ವದ ಪೀಠವೊಂದು ಆರೋಪಿಸಿದೆ.

ಈಗ ಸ್ಥಾನಾಂತರಿಸಲ್ಪಟ್ಟಿರುವ ಕೊಲೀಜಿಯಂ ವ್ಯವಸ್ಥೆಯನ್ನು ಬಲವಾಗಿ ಬೆಂಬಲಿಸಿದ ಪೀಠ ಅದು ಭ್ರಷ್ಟಾಚಾರವನ್ನು ತೊಡೆದು ಹಾಕಲು ಸಾಕಷ್ಟು ತಪಾಸಣೆಗಳನ್ನು ಹೊಂದಿತ್ತು ಎಂದಿದೆ.

ಅಂತಹ ದೂರುಗಳ ವಿರುದ್ಧ ನ್ಯಾಯಾಧೀಶ ನೊಬ್ಬನು ವಿರೋಧಿಸಲು ಸಾಧ್ಯವಿಲ್ಲದವನಾಗಿದ್ದಾನೆಂಬುದು ಈ ವಕೀಲರಿಗೆ ಚೆನ್ನಾಗಿ ಗೊತ್ತಿದೆ. ಆದುದರಿಂದ ಅವರು ಅನಾಮಿಕವಾಗಿ ಕಲ್ಲೆಸೆಯುವುದನ್ನು ಮುಂದುವರಿಸುತ್ತಾರೆಂದು ಪೀಠ ದೂರಿದೆ.

ನ್ಯಾಯಾಧೀಶರ ಜೀವನ ದಯನೀಯವಾಗಿದೆಯೆಂದು ನ್ಯಾ.ದತ್ತು ಹೇಳಿದರು.

ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಿದುದನ್ನು ‘ಅವರ ಸಮಗ್ರತೆ ಪ್ರಶ್ನಾರ್ಹವಾಗಿದೆ’ ಎಂದು ಆಕ್ಷೇಪಿಸಿದ್ದ ಅರ್ಜಿಯೊಂದನ್ನು ತಳ್ಳಿ ಹಾಕಿದ ಪೀಠ, ಕೊಲೀಜಿಯಂ ವ್ಯವಸ್ಥೆಯು ಭ್ರಷ್ಟಾಚಾರ ತಡೆಗೆ ಸಾಕಷ್ಟು ಸಾಧನಗಳನ್ನು ಹೊಂದಿತ್ತು ಎಂದಿದೆ.

Write A Comment