ರಾಷ್ಟ್ರೀಯ

ಮಾವೋ ನಾಯಕ ಕೋಬಡ್ ಗಾಂಧಿಗೆ 3 ತಿಂಗಳ ಜಾಮೀನು

Pinterest LinkedIn Tumblr

Kobadಹೊಸದಿಲ್ಲಿ, ಸೆ.29: ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ)ಗೆ ದಿಲ್ಲಿಯಲ್ಲಿ ನೆಲೆ ಸ್ಥಾಪಿಸಲು ಪ್ರಯತ್ನಿಸಿದ ಆರೋಪದ ಮೇಲೆ ಬಂಧಿತನಾಗಿರುವ ಹಿರಿಯ ಮಾವೋವಾದಿ ನಾಯಕ ಕೋಬಡ್ ಗಾಂಧಿಗೆ ಅನಾರೋಗ್ಯದ ನೆಲೆಯಲ್ಲಿ ಮೂರು ತಿಂಗಳ ಮಧ್ಯಾಂತರ ಜಾಮೀನು ಒದಗಿಸಲಾಗಿದೆ.

2009ರ ಸೆಪ್ಟಂಬರ್‌ನಿಂದ ಕಾರಾಗೃಹದಲ್ಲಿರುವ 65ರ ಪ್ರಾಯದ ಗಾಂಧಿ ಬೇರೆಬೇರೆ ಕಾಯಿಲೆಗಳಿಂದ ನರಳುತ್ತಿದ್ದಾನೆ. ಆತನ ದೈಹಿಕ ಸ್ಥಿತಿ ಮೇಲ್ನೋಟಕ್ಕೆ ಗಂಭೀರವಾಗಿದೆ ಎಂದು ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರೀತೇಶ್ ಸಿಂಗ್ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ವೈಯಕ್ತಿಕ ಜಾಮೀನು ಹಾಗೂ ಅಷ್ಟೇ ಮೊತ್ತದ ಎರಡು ಭದ್ರತೆಗಳ ಮೇಲೆ ನ್ಯಾಯಾಲಯವು ಆರೋಪಿಗೆ ಮಧ್ಯಾಂತರ ಜಾಮೀನು ನೀಡುತ್ತಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Write A Comment