ಅಂತರಾಷ್ಟ್ರೀಯ

ಹಜ್ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೋಟ್ ಬ್ಲಾಸ್ಟ್: ಪವಾಡಸದೃಶ ಪಾರಾದ ಮಾಲ್ಡೀವ್ಸ್ ಅಧ್ಯಕ್ಷ ಗಯೂಮ್‌-ಪತ್ನಿ

Pinterest LinkedIn Tumblr

maldives

ಮಾಲೆ/ಹೊಸದಿಲ್ಲಿ: ಪವಿತ್ರ ಹಜ್‌ ಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಸೌದಿ ಅರೇಬಿಯ ಭೇಟಿಯನ್ನು ಮುಗಿಸಿ ಮರಳುತ್ತಿದ್ದ ಮಾಲ್ದೀವ್‌ ಅಧ್ಯಕ್ಷ ಯಮೀನ್‌ ಅಬ್ದುಲ್‌ ಗಯೂಮ್‌ ಮತ್ತು ಅವರ ಪತ್ನಿ ಫಾತಿಮಾ ಇಬ್ರಾಹಿಂ ಅವರು ಪಯಣಿಸುತ್ತಿದ್ದ ಸ್ಪೀಡ್‌ ಬೋಟ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಅದೃಷ್ಟವಶಾತ್‌ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೋಟ್ ದುರಂತದಲ್ಲಿ ಅಧ್ಯಕ್ಷ ಅಬ್ದುಲ್‌ ಗಯೂಮ್‌ ಅವರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಫಾತಿಮಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಲ್ದೀವ್‌ ಅಧಿಕಾರಿಗಳು ತಿಳಿಸಿದ್ದಾರೆ.

maldives1

maldives12

Officials carry an injured woman off the speed boat of Maldives President Abdulla Yameen after an explosion onboard, in Male, Maldives

ಸ್ಫೋಟಕ್ಕೆ ಕಾರಣವೆನೆಂಬುದು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಬೋಟ್‌ನ ಇಂಜಿನ್‌ ರೂಮ್‌ನಲ್ಲಿ ಉಂಟಾಗಿರಬಹುದಾದ ತಾಂತ್ರಿಕ ದೋಷಗಳಿಂದ ಈ ಸ್ಫೋಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಅಧ್ಯಕ್ಷರು ಹಾಗೂ ಅವರ ಪತ್ನಿ ಸಂಚರಿಸುತ್ತಿದ್ದ ಬೋಟ್‌ನಲ್ಲಿ ಸ್ಫೋಟ ಸಂಭವಿಸಿದೊಡನೆಯೇ ಅವರನ್ನು ಬೆಂಗಾವಲಲ್ಲಿದ್ದ ಪೊಲೀಸ್‌ ಸ್ಪೀಡ್‌ ಬೋಟ್‌ಗೆ ವರ್ಗಾಯಿಸಿ ಪಾರುಗೊಳಿಸಲಾಯಿತು ಎಂದು ಅವರು ಹೇಳಿದರು.

Write A Comment