ರಾಷ್ಟ್ರೀಯ

ಮಾರಕ ಡೆಂಗ್ಯೂ ಗೆ ಶೀಘ್ರವೇ ಭಾರತೀಯ ಲಸಿಕೆ: ವಿಜ್ಞಾನಿಗಳ ವಿಶ್ವಾಸ

Pinterest LinkedIn Tumblr

dengu-new11ನವದೆಹಲಿ: ದೇಶಾದ್ಯಂತ ಎಲ್ಲೆಡೆ ಕಾಡುತ್ತಿರುವ ಮಹಾಮಾರಿ ಡೆಂಗ್ಯೂ ರೋಗಕ್ಕೆ ಭಾರತೀಯ ಲಸಿಕೆ ಕಂಡು ಹಿಡಿಯಲು ಭಾರತದ ವಿಜ್ಞಾನಿಗಳು ಮುಂದಾಗಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಲಸಿಕೆ ಕಂಡು ಹಿಡಿಯುವುದಾಗಿ ಭಾರತೀಯ ಪ್ರಯೋಗಾಲಯದ ವಿಜ್ಞಾನಿಗಳು ಭರವಸೆ ನೀಡಿದ್ದಾರೆ.

ಈಗಾಗಲೇ ಭಾರತೀಯ ಲಸಿಕೆ ಕಂಡು ಹಿಡಿಯಲು ಸಂಶೋಧನೆ ನಡೆಸಲಾಗುತ್ತಿದ್ದು, ಕೋತಿಗಳ ಮೇಲೆ ಪ್ರಯೋಗ ನಡೆಸಲಾಗಿದೆ.  ಮನುಷ್ಯರ ಮೇಲೆ ಇದರ ಪ್ರಯೋಗ ನಡೆಸಲು ತುಂಬಾ ಸಮಯ ತೆಗೆದು ಕೊಳ್ಳುತ್ತದೆ. ಎಲ್ಲವನ್ನು ಒಂದು ಯೋಜಿತ ರೀತಿಯಲ್ಲಿ ಮಾಡಬೇಕು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಡೆಂಗ್ಯೂಗೆ ಲಸಿಕೆ  ತಯಾರಿಸಲು ಐದು ವರ್ಷಗಳ ಹಿಂದೆಯೇ  8 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಬಗ್ಗೆ ಎಲ್ಲಿಯೂ ಮಾಹಿತಿ ಹೊರ ಹಾಕದಂತೆ ಎಚ್ಚರ ವಹಿಸಲಾಗಿತ್ತು. ಆದರೆ ಹಿಂದಿನ ತಿಂಗಳು ಈ ಲಸಿಕೆಗೆ ಅಂತಾರಾಷ್ಟ್ರೀಯ ಪೇಟೆಂಟ್ ದೊರಕಿದೆ.

ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಬರಲಿದೆ. ಈ ಜ್ವರ ಬಂದ ಕೆಲವರು ಚೇತರಿಸಿಕೊಂಡರೆ ಕೆಲವರು ಸಾವನ್ನಪ್ಪುತ್ತಾರೆ. ಹೀಗಾಗಿ ಶೀಘ್ರವೇ ಡೆಂಗ್ಯೂ ಲಸಿಕೆ ಕಂಡು ಹಿಡಿಯುವುದಾಗಿ ಭಾರತೀಯ ವಿಜ್ಞಾನಿಗಳ ತಂಡ ವಿಶ್ವಾಸ ವ್ಯಕ್ತ ಪಡಿಸಿದೆ.

Write A Comment