ರಾಷ್ಟ್ರೀಯ

ಕಚ್ಚಿದ ಹಾವಿನ ಚರ್ಮ ತಿಂದು ಪ್ರತೀಕಾರ ಗೈದ

Pinterest LinkedIn Tumblr

Drunk-man-Eats-snak

ಆಗ್ರಾ, ಸೆ.26: ಹಾವಿನ ದ್ವೇಷ 12 ವರ್ಷ ಅಂತ ನಾಗರಹಾವು ಚಿತ್ರದ ಹಾಡನ್ನು ನೀವು ಕೇಳಿರಬಹುದು. ಆದರೆ, ಇಲ್ಲೊಬ್ಬ ಹಾವಿನ ಮೇಲೆಯೇ ಸೇಡು ತೀರಿಸಿದ ಘಟನೆ ನಡೆದಿದೆ. ಹೌದು, ಆಗ್ರಾದ ಫತೇಹಾಬಾದ್‌ನಲ್ಲಿ ಯುವಕನೋರ್ವ ಹಾವಿನಿಂದ ಕಚ್ಚಿಸಿಕೊಂಡ ಬಳಿಕ ಅದನ್ನು ಹಿಡಿದು ಅದರ ಚರ್ಮವನ್ನೇ ಕಚ್ಚಿತಿಂದಿದ್ದಾನೆ.

ಹೌದು, ಹಾವು ನೋಡಿದ ತಕ್ಷಣ ಭಯಪಡುವವರೇ ಹೆಚ್ಚು, ಅಂತಹದರಲ್ಲಿ ಹಾವು ಕಚ್ಚಿತು ಎಂದರೆ ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಈತ ಅದರ ಚರ್ಮವನ್ನೇ ಕಿತ್ತಿದ್ದಾನೆ. ಇಲ್ಲಿನ ವ್ಯಕ್ತಿಯೋರ್ವ ಸಾರಾಯಿ ಕುಡಿಯುತ್ತ ಕುಳಿತಿದ್ದ ವೇಳೆ ಹಾವೊಂದು ಬಂದು ಆತನಿಗೆ ಕಚ್ಚಿದೆ. ಇದರಿಂದ ಕುಪಿತಗೊಂಡ ಆತ ಅದನ್ನು ಹಿಡಿದು ಅದರ ಚರ್ಮವನ್ನೇ ತಿಂದಿದ್ದಾನೆ. ಇಷ್ಟಾದರೂ ಆತನಿಗೆ ಯಾವುದೇ ತೊಂದರೆಯಾಗದೇ ಆರೋಗ್ಯವಾಗಿದ್ದಾನಂತೆ. ತನಗೆ ಹಾವು ಕಚ್ಚಿದರೂ ತನಗೆ ವಿಷವೇರಿಲ್ಲ ಎಂಬ ವಿಷಯ ಅವರ ಗ್ರಾಮದಲ್ಲಿ ಹರಡುತ್ತಿದ್ದಂತೆ ಗ್ರಾಮಸ್ಥರು ಆಶ್ಚರ್ಯವಾಗಿದ್ದಾರೆ.

Write A Comment