ರಾಷ್ಟ್ರೀಯ

ವಾರಣಾಸಿ ಸಮೀಪದ ಗುಹೆಯಲ್ಲಿ ಕೊನೆ ದಿನ ಕಳೆದಿದ್ದರು ನೇತಾಜಿ!

Pinterest LinkedIn Tumblr

subhash-chandra-boseನವದೆಹಲಿ:  ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಸಾವಿನ ಹಿಂದಿನ ನಿಗೂಢತೆ ಇಂದಿಗೂ ದೇಶಾದ್ಯಂತದ ಜನರನ್ನು ಹಾಗೂ ಬೋಸ್‌ ಅಭಿಮಾನಿಗಳನ್ನು ಏಕಪ್ರಕಾರವಾಗಿ ಕಾಡುತ್ತಿದೆ. ಬೋಸ್‌ ಅವರ ಕೊನೆಯ ದಿನಗಳ ಬಗ್ಗೆ ದಿನ ನಿತ್ಯವೆಂಬಂತೆ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಲೇ ಇದ್ದು  ಜನರ ಕುತೂಹಲಕ್ಕೆ ಕಾರಣವಾಗಿದೆ.

ಬೋಸ್‌ ಅವರು ತಮ್ಮ ಕೊನೆಯ ದಿನಗಳನ್ನು ವಾರಾಣಸಿ – ಗಾಜೀಪುರ ಪಟ್ಟಿಯಲ್ಲಿನ ಕಾಥೀ ಗ್ರಾಮದ ಗುಹೆಯೊಂದರಲ್ಲಿ ಸನ್ಯಾಸಿಯ ರೀತಿಯಲ್ಲಿ ಕಳೆದಿದ್ದರು ಹಿಂದಿ ಪತ್ರಿಕೆಯೊಂದು ವರದಿ ಮಾಡಿದೆ. ನೇತಾಜಿ ಅವರು ತಮ್ಮ ಈ ಕೊನೆಯ ದಿನಗಳಲ್ಲಿ ತಮ್ಮನ್ನು ಸ್ವಾಮೀ ಶಾರದಾನಂದ ಎಂದು ಹೇಳಿಕೊಳ್ಳುತ್ತಿದ್ದರು ಎಂದು ವರದಿ ತಿಳಿಸಿದೆ.

ಬೋಸ್‌ ಅವರಿಗೆ ಮಾಜಿ ಲೋಕೋಪಯೋಗಿ ಉದ್ಯೋಗಿ ಕೃಷ್ಣಕಾಂತ್‌ ಎಂಬವರು ತುಂಬಾ ನಿಕಟವಾಗಿದ್ದರು. ನೇತಾಜಿ ಅವರ ಬದುಕಿಗೆ ಅವಶ್ಯವಿದ್ದ ಎಲ್ಲ ಸೌಕರ್ಯಗಳನ್ನು ಈ ಕೃಷ್ಣಕಾಂತ್‌ ಎಂಬ ವ್ಯಕ್ತಿ ಮಾಡುತ್ತಿದ್ದರು. ಕಾಥಿಯ ಗುಹೆಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ  ಕೆಲ ದಿನಗಳ ಅಂತರದಲ್ಲಿ ನೇತಾಜಿ ಅವರು ಕಾಥಿ ಗ್ರಾಮದ ಹೊರ ವಲಯದ ಪ್ರದೇಶಗಳಿಗೆ ಹೋಗಿ ಬರುತ್ತಿದ್ದರು. ನೇತಾಜಿ ಮತ್ತು ಕೃಷ್ಣಕಾಂತ್‌ ನಡುವೆ ಪತ್ರ ವ್ಯವಹಾರವೂ ನಡೆದಿತ್ತು ಎನ್ನಲಾಗಿದೆ. ನೇತಾಜಿ ಅವರೊಂದಿಗೆ ಮಾತುಕತೆ, ಸಂವಾದ ಇತ್ಯಾದಿಗಳನ್ನೆಲ್ಲ ಕೃಷ್ಣಕಾಂತ ತಮ್ಮ ದಿನಚರಿ ಪುಸ್ತಕದಲ್ಲಿ ಬರೆದಿಡುತ್ತಿದ್ದರು. ಆದರೆ ನೇತಾಜಿ ವಾಸವಾಗಿದ್ದ ಕಾಥೀ ಗ್ರಾಮದ ಗುಹೆಯು ಕಾಲಕ್ರಮದಲ್ಲಿ ಗಂಗಾ ನದಿಯಲ್ಲಿ ಉಕ್ಕಿ ಬಂದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ಈಗ ಅದರ ಸುಳಿವೇ ಇಲ್ಲವಾಗಿದೆ.

ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಶ್ಯಾಮಚರಣ ಪಾಂಡೆ ಎನ್ನುವವರು ತಮ್ಮ ತಂದೆ ಮತ್ತು ನೇತಾಜಿ ನಡುವೆ ವಿನಿಯಮವಾಗಿದ್ದ ಪತ್ರಗಳನ್ನು ಮತ್ತು ತಂದೆ ಬರೆದಿಟ್ಟಿದ್ದ ಡೈರಿಯನ್ನು ಯಥಾವತ್ತಾಗಿ ಉಳಿಸಿಕೊಂಡಿದ್ದು ಅದನ್ನು ಅವರು ಈಚೆಗೆ ಪೂರ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಪ್ಪಿಸಿದ್ದಾರೆ.

ನೇತಾಜಿ ಅವರು ತಮ್ಮ ನೈಜ ಗುರುತನ್ನು ಎಲ್ಲೂ ಬಹಿರಂಗಪಡಿಸಲಿಲ್ಲ; ಏಕೆಂದರೆ ಹಾಗೆ ತನ್ನ ಗುರುತು ಬಹಿರಂಗಗೊಂಡಲ್ಲಿ ತನ್ನನ್ನು ಅಂತಾರಾಷ್ಟ್ರೀಯ ಯುದ್ಧಾಪರಾಧಗಳ ಒಪ್ಪಂದದ ಪ್ರಕಾರ ಬ್ರಿಟಿಷರಿಗೆ ಹಸ್ತಾಂತರಿಸಬೇಕಾದ ಒತ್ತಡ ಆಗಿನ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರ ಮೇಲೆ ಬರುತ್ತಿತ್ತು ಎಂದು ಗುಪ್ತಚರ ದಳದ ಮಾಜಿ ಅಧಿಕಾರಿಯಾಗಿರುವ ಪಾಂಡೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

Write A Comment