ಅಂತರಾಷ್ಟ್ರೀಯ

ಎ. ಆರ್‌. ರೆಹಮಾನ್‌ ವಿರುದ್ಧ ಫತ್ವಾ : ಇರಾನ್‌ ಖಂಡನೆ

Pinterest LinkedIn Tumblr

rehman

ನವದೆಹಲಿ : ಸಂಗೀತ ನಿರ್ದೇಶಕ ಎ. ಆರ್‌. ರೆಹಮಾನ್‌ ವಿರುದ್ಧ ಹೊರಡಿಸಿರುವ ಫತ್ವಾವನ್ನು ಇರಾನ್‌ ಸರ್ಕಾರ ತೀವ್ರವಾಗಿ ಖಂಡಿಸಿದೆ.

ಭಾರತದಲ್ಲಿರುವ ಇರಾನ್‌ ರಾಯಭಾರಿ ಕಚೇರಿ ಮೂಲಕ ಪ್ರಕಟಣೆ ನೀಡಿರುವ ಇರಾನ್‌ ಸರ್ಕಾರ ರೆಹಮಾನ್‌ ವಿರುದ್ಧ ಪತ್ವಾ ಹೊರಡಿಸಿರುವುದು ಸರಿಯಾದ ಕ್ರಮವಲ್ಲ ಎಂದಿದೆ. ಇರಾನ್‌ ನಿರ್ದೇಶಕ ಮಜಿದ್‌ ಮಜಿದಿ ನಿರ್ದೇಶಿಸಿರುವ ‘ಮುಹಮ್ಮದ್‌: ದಿ ಮೆಸೆಂಜೆರ್‌ ಆಫ್‌ ಗಾಡ್‌’ ಚಿತ್ರಕ್ಕೆ ರೆಹಮಾನ್‌ ಸಂಗೀತ ನೀಡಿದ್ದಾರೆ. ಈ ಚಿತ್ರ ಇಸ್ಲಾಂಗೆ ಅಗೌರವ ತೋರುತ್ತದೆ ಎಂದು ಆರೋಪಿಸಿ ರಜಾ ಅಕಾಡೆಮಿ ರೆಹಮಾನ್‌ ವಿರುದ್ಧ ಪತ್ವಾ ಹೊರಡಿಸಿದೆ. ಮಂಗಳವಾರ ತಮ್ಮ ವಿರುದ್ಧ ಪತ್ವಾ ಹೊರಡಿಸಿರುವ ಬಗ್ಗೆ ರೆಹಮಾನ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಮುಹಮ್ಮದ್‌ ಅವರ ಆರಂಭದ ದಿನಗಳು ಮತ್ತು ಅವರು ಪ್ರವಾದಿಯಾದ ನಂತರದ ದಿನಗಳ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ.

Write A Comment