ಭೋಪಾಲ್: ಮಧ್ಯಪ್ರದೇಶ 10 ನೇ ವಿಶ್ವ ಹಿಂದಿ ಸಮ್ಮೇಳನದ ಆತಿಥ್ಯ ವಹಿಸಲು ಸಿದ್ಧವಾಗಿದೆ. ಆದರೆ ವಿಶ್ವ ಹಿಂದಿ ಸಮ್ಮೇಳನಕ್ಕೆ ಪ್ರಮುಖ ಹಿಂದಿ ವಿದ್ವಾಂಸರು, ಬರಹಗಾರನ್ನೇ ಆಹ್ವಾನಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸೆ.10 -12 ವರೆಗೆ ಮಧ್ಯಪ್ರದೇಶದಲ್ಲಿ ವಿಶ್ವ ಹಿಂದಿ ಸಮ್ಮೇಳನ ನಡೆಯಲಿದ್ದು ದೇಶದ ವಿವಿಧ ಭಾಗಗಳಿಂದ 5000 ವಿದ್ವಾಂಸರು ಭಾಗವಹಿಸಲಿದ್ದಾರೆ. ದೇಶಾದ್ಯಂತ ಇರುವ ವಿದ್ವಾಂಸರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ ಆದರೆ ಮಧ್ಯಪ್ರದೇಶದಲ್ಲಿರುವ ಸ್ಥಳೀಯ ವಿದ್ವಾಂಸರನ್ನೇ ಕಡೆಗಣಿಸಲಾಗಿದೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಿಂದಿ ಬರಹಗಾರ ರಾಮ್ ಪ್ರಕಾಶ್ ತ್ರಿಪಾಟಿ, ಮೋದಿ ಹಾಗೂ ಅವರ ಸರ್ಕಾರದ ಗುರಿ ಅನಿವಾಸಿ ಭಾರತೀಯರನ್ನು ಓಲೈಕೆ ಮಾಡುವ ಉದ್ದೇಶ ಹೊಂದಿದೆ. ಶಿಕ್ಷಣ- ಭಾಷೆ ಎಲ್ಲವನ್ನೂ ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಸ್ಥಳಿಯ ಹಿಂದಿ ಬರಹಗಾರರನ್ನು ಆಹ್ವಾನಿಸದೇ ಇರುವುದು ಸಮ್ಮೇಳನ ಆಯೋಜನೆ ಮಾಡಿರುವವರ ಸಂಕುಚಿತ ಮನಸನ್ನು ತೋರಿಸುತ್ತದೆ ಎಂದು ತ್ರಿಪಾಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜೇಶ್ ಜೋಷಿ, ರಾಜೇಶ್ ಶಾ, ವಿಜಯ್ ಬಹದ್ದೂರ್, ರಾಮ್ ಪ್ರಕಾಶ್ ತ್ರಿಪಾಟಿ ಸೇರಿದಂತೆ ಹಲವು ಖ್ಯಾತ ಹಿಂದಿ ವಿದ್ವಾಂಸರನ್ನು ಹಿಂದಿ ಸಮ್ಮೇಳನಕ್ಕೆ ಆಹ್ವಾನಿಸಿಲ್ಲ.