ಹೊಸದಿಲ್ಲಿ, ಆ.28: 1965ರ ಭಾರತ-ಪಾಕಿಸ್ತಾನ ಯುದ್ಧದ 50ನೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವೀರ ಯೋಧರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.
ದೇಶದ ಏಕತೆ ಮತ್ತು ಸಮಗ್ರತೆಯನ್ನು ಸಂರಕ್ಷಿಸುವ ದಿಸೆಯಲ್ಲಿ ನಮ್ಮ ಯೋಧರು ಎಲ್ಲ ಅಡೆತಡೆಗಳ ವಿರುದ್ಧ ಗೆಲುವು ಸಾಧಿಸಿದರು ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.
1965ರ ಯುದ್ಧದಲ್ಲಿ ತಾಯಿನಾಡಿಗಾಗಿ ಹೋರಾಡಿದ ಎಲ್ಲ ವೀರ ಯೋಧರಿಗೆ ನಾನು ತಲೆಬಾಗುತ್ತೇನೆ. ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಹಾಗೂ ಶೌರ್ಯಗಳು ಸ್ಫೂರ್ತಿದಾಯಕವಾದುದು ಎಂದು ಪ್ರಧಾನಿ ಟ್ವೀಟ್ ಮಾಡುತ್ತ ಹೇಳಿದ್ದಾರೆ.
ಜೊತೆಗೆ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಕ್ರಿಯಾಶೀಲ ನಾಯಕತ್ವವನ್ನು ಮೋದಿ ನೆನಪಿಸಿಕೊಂಡಿದ್ದಾರೆ. 1965ರ ಯುದ್ಧದಲ್ಲಿ ಶಾಸ್ತ್ರಿಯವರು ದೇಶದ ಪಾಲಿಗೆ ಶಕ್ತಿಯಂತಿದ್ದರು ಎಂದು ಪ್ರಧಾನಿ ಹೇಳಿದ್ದಾರೆ.
1965ರ ಯುದ್ಧದಲ್ಲಿ ಜಮ್ಮು ಮತ್ತು ಕಾಶ್ಮೀರದ ಹಾಜಿ ಪೀರ್ ಪಾಸ್‌ನಲ್ಲಿ ಭಾರತದ ಸಶಸ್ತ್ರ ಪಡೆಗಳು ಪಾಕ್ ಸೇನೆಯ ವಿರುದ್ಧ ಗಳಿಸಿದ ನಿರ್ಣಾಯಕ ಗೆಲುವಿನ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.
ರಾಷ್ಟ್ರೀಯ