ರಾಷ್ಟ್ರೀಯ

ಸಾವಿರಾರು ಜಾಗ್ವಾರ್ ಕಾರುಗಳು ಸುಟ್ಟು ಕರಕಲಾಯ್ತು !!

Pinterest LinkedIn Tumblr

CARಜಾಗ್ವಾರ್ ಕಾರು ಎಂದರೆ ಅದೇನೋ ಕುತೂಹಲ. ಕೊಳ್ಳಲಾಗದಿದ್ದರೂ ನೋಡಲು ಸಿಕ್ಕಿದರೂ ಸಾಕು ಎಂಬ ಭಾವನೆ ಹಲವರದ್ದು. ಇಂತಹ ದುಬಾರಿ ಕಾರಿಗೆ ಬೆಂಕಿ ಬಿದ್ದರೆ…? ತಮಾಷೆ ಮಾಡ್ಬೇಡಿ ಅಂತೀರಾ …? ಈ ಸ್ಟೋರಿ ಓದಿ.

ಹೌದು. ಇತ್ತೀಚೆಗಷ್ಟೇ ಚೀನಾದ ಟಿಯಾಂಜಿನ್​ನಲ್ಲಿ ನಡೆದ ಸರಣಿ ಸ್ಪೋಟದಲ್ಲಿ 5,800 ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದ್ದು ಎಲ್ಲರಿಗೂ ತಿಳಿದಿದೆ. ಆದರೆ ಈ ಅವಘಡದಲ್ಲಿ ಸುಟ್ಟು ಕರಕಲಾಗಿರುವ ಎಲ್ಲಾ ಕಾರುಗಳೂ ಜಾಗ್ವರ್ ಲ್ಯಾಂಡ್ ರೋವರ್ ಗಳಾಗಿವೆ ಎಂದು ಟಾಟಾ ಮೊಟಾರ್ಸ್ ತಿಳಿಸಿದೆ.

ದುರದೃಷ್ಟವೆಂದರೆ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಹತ್ತಿರದಲ್ಲಿ ಇತ್ತೀಚೆಗಷ್ಟೇ ಈ ಎಲ್ಲಾ ಕಾರುಗಳನ್ನು ಬೇರೆ ಕಡೆಯಿಂದ ತಂದು  ಇರಿಸಲಾಗಿತ್ತು. ಘಟನೆಯಲ್ಲಿ ಇವೆಲ್ಲವೂ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದ್ದು ಸಾಕಷ್ಟು ನಷ್ಟವಾಗಿದೆ ಎಂದು ಕಂಪನಿ ತಿಳಿಸಿದೆ.

Write A Comment