ರಾಷ್ಟ್ರೀಯ

ಪ್ರೇಮ ಸೌಧದ ತೂಗು ದೀಪ ಕಳಚಿ ಬಿತ್ತು !

Pinterest LinkedIn Tumblr

AAಪ್ರೇಮ ಸೌಧ ಎಂದೇ ಕರೆಯಿಸಿಕೊಂಡಿರುವ ತಾಜ್ ಮಹಲಿನ ಮುಖ್ಯ ದ್ವಾರದಲ್ಲಿದ್ದ ತಾಮ್ರದ ತೂಗು ದೀಪದ ಗೊಂಚಲು ಮುರಿದು ಬಿದ್ದ ಘಟನೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಪ್ರಾಚ್ಯ ಸಂಶೋಧನಾ ಇಲಾಖೆ ಆದೇಶಿಸಿದೆ.

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲಿನ ಮುಖ್ಯ ದ್ವಾರದಲ್ಲಿ ಬ್ರಿಟಿಷರ ಕಾಲದಲ್ಲಿ ನೀಡಲಾಗಿದ್ದ  60 ಕೆಜಿ ತೂಕವಿದ್ದ ತೂಗುದೀಪದ ಗೊಂಚಲು ಬುಧವಾರ ಇದ್ದಕ್ಕಿದ್ದಂತೆ ಮುರಿದು ಬಿದ್ದಿತ್ತು. ಆರು ಅಡಿ ಎತ್ತರ, ನಾಲ್ಕು ಅಡಿ ಅಗಲವಿದ್ದ ಈ ತೂಗು ದೀಪವನ್ನು ಲಾರ್ಡ್ ಕರ್ಜನ್ ಉಡುಗೊರೆಯಾಗಿ ನೀಡಿದ್ದು ಇದನ್ನು 1905 ರಲ್ಲಿ ಈ ತಾಜ ಮಹಲಿನ ಮುಖ್ಯ ದ್ವಾರದಲ್ಲಿ ನೇತು ಹಾಕಲಾಗಿತ್ತು. ಈ ತೂಗು ದೀಪ ಹಳೆಯದಾದುದರಿಂದ ಮುರಿದು ಬಿದ್ದಿದೆ ಎನ್ನಲಾಗಿದ್ದು ಈ ಸಮಯದಲ್ಲಿ ಅಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅವಘಡ ಸಂಭವಿಸಿರಲಿಲ್ಲ.

ಈ ಘಟನೆಯ ಕುರಿತಂತೆ ತನಿಖೆ ನಡೆಸುವಂತೆ ಭಾರತೀಯ ಪ್ರಾಚ್ಯ ಸಂಶೋಧನಾ ಇಲಾಖೆ ಸೂಪರಿಂಡೆಂಟ್ ಭುವನ್ ಕುಮಾರ್  ಆದೇಶಿದ್ದಾರೆ.

Write A Comment