ರಾಷ್ಟ್ರೀಯ

ಮೋದಿ ಪ್ರಧಾನಿ ಆಗೋವರೆಗೂ ಚಪ್ಪಲಿ ಹಾಕಲ್ಲ ಎಂದು 2 ವರ್ಷಗಳ ಹಿಂದೆ ಶಪಥ ಮಾಡಿದ್ದ ವ್ಯಕ್ತಿ ಭೇಟಿಯಾದ ಮೋದಿ

Pinterest LinkedIn Tumblr

modi22

ಜೈಪುರ: ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗುವವರೆಗೂ ಹಾಗೂ ಅವರನ್ನು ಭೇಟಿ ಆಗುವವರೆಗೂ ಪಾದರಕ್ಷೆ ಹಾಕುವುದಿಲ್ಲ ಎಂದು 2 ವರ್ಷಗಳ ಹಿಂದೆ ಶಪಥ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊನೆಗೂ ಭೇಟಿಯಾಗಿದ್ದಾರೆ.

ಶಪಥ ಮಾಡಿದ್ದ ವ್ಯಕ್ತಿ ರಾಜಸ್ಥಾನದ ಮೂಲದವನಾಗಿದ್ದು ಬಲ್ವಂತ್ ಕುಮಾವತ್ ಎಂದು ಹೇಳಲಾಗುತ್ತಿದೆ. ಈತ ಕಳೆದೆರಡು ವರ್ಷಗಳಿಂದ ಪಾದರಕ್ಷೆ ಧರಿಸದೆ ಮೋದಿ ಅವರ ಭೇಟಿಗಾಗಿ ಪರಿತಪಿಸುತ್ತಿದ್ದ. ಮೋದಿ ಅವರ ಅಪ್ಪಟ ಅಭಿಮಾನಿಯಾಗಿರುವ ಈಗ ಮೋದಿ ಪ್ರಧಾನಮಂತ್ರಿ ಆಗೋವರೆಗೂ, ಅವರನ್ನು ಭೇಟಿ ಮಾಡುವವರೆಗೂ ಪಾದರಕ್ಷೆಯನ್ನೇ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದ.

ಎಫ್ಐಪಿಐಸಿ ಶೃಂದಸಭೆಗಾಗಿ ಜೈಪುರಕ್ಕೆ ತೆರಳಿದ ವೇಳೆ ವ್ಯಕ್ತಿಯ ಕುರಿತಂತೆ ಮಾಹಿತಿ ತಿಳಿದ ಮೋದಿ ಅವರು ಈ ವೇಳೆ ಬಲ್ವಂತ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಈ ರೀತಿಯಾಗಿ ದೇಹಕ್ಕೆ ಹಾನಿಯುಂಟಾಗುವ ಯಾವುದೇ ಕೆಲಸವನ್ನು ಮಾಡಬೇಡಿ. ನಿಮ್ಮ ಶಕ್ತಿಯನ್ನು ದೇಶದ ಕಟ್ಟಲು, ರಾಷ್ಟ್ರ ನಿರ್ಮಾಣ ಮಾಡುವುದಕ್ಕೆ ಬಳಸಿ ಎಂದು ಸಲಹೆ ನೀಡಿದ್ದಾರೆ.

ಮೋದಿ ಭೇಟಿ ನಂತರ ಸಂತೋಷಪಟ್ಟಿರುವ ಬಲ್ವಂತ್ ಕುಮಾವತ್ ಅವರು ಇದೀಗ ಮೋದಿ ಅವರ ಸಲಹೆ ಮೇರೆಗೆ ಮತ್ತೆ ಪಾದರಕ್ಷೆಗಳನ್ನು ಧರಿಸಿದ್ದಾರೆ.

Write A Comment