ರಾಷ್ಟ್ರೀಯ

ಮಗು ಬಲಿ ಪಡೆದ ಮಂಗ !

Pinterest LinkedIn Tumblr

monkey

ಜೈಪುರ: ಕೋತಿಯೊಂದು ಎರಡು ತಿಂಗಳ ಮಗುವನ್ನು ಟ್ಯಾಂಕ್‌ಗೆ ಎಸೆದು ಕೊಂದಿರುವ ದುರ್ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯ ರಸೀದ್‌ಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಮಗು ಯೋಗೇಶ್ವರಿ ಹಾಸಿಗೆ ಮೇಲೆ ಮಲಗಿದ್ದಾಗ ಕಿಟಕಿ ಮೂಲಕ ಮನೆಯೊಳಗೆ ಬಂದ ಕೋತಿ ಹಸುಗೂಸನ್ನು ಹೊತ್ತೊಯ್ದಿದೆ. ಮಗುವಿನ ತಂದೆ, ತಾಯಿ ಹಾಗೂ ಕುಟುಂಬದವರು ಅಟ್ಟಿಸಿಕೊಂಡು ಹೋದಾಗ ಮಗು ಕೈ ಜಾರಿ ಟ್ಯಾಂಕ್‌ಗೆ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ವೈಫಲ್ಯದಿಂದ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಕಳೆದ ಹಲವು ವರ್ಷಗಳಿಂದ ರಸೀದ್‌ಪುರ ಹಾಗೂ ಸುತ್ತಮುತ್ತಲ ಗ್ರಾಮಗಳು ಮಂಗಗಳ ಕಾಟದಿಂದ ಬೇಸತ್ತಿವೆ.

Write A Comment