ಮುಂಬೈ: ಬಾಲಿವುಡ್‍ನಲ್ಲಿ ಸಾಕಷ್ಟು ಅವತಾರಗಳಲ್ಲಿ ತೆರೆಮೇಲೆ ಕಾಣಿಕೊಂಡಿರುವ ಬಿಗ್ ಬಿ ಈಗ ಅಬ್ದುಲ್ ಕಲಾಂ ಜೀವನಚರಿತ್ರೆಯ ಕುರಿತಾದ ಸಿನಿಮಾದಲ್ಲಿ ರೀಲ್ ಕಲಾಂ ಆಗಿ ಅಭಿನಯಿಸಲಿದ್ದಾರೆ.
ಈ ಹಿಂದೆ `ಐಯಾಮ್ ಕಲಾಂ’ ಎಂಬ ಸಿನಿಮಾ ಮಾಡಿ, ರಾಷ್ಟ್ರಪ್ರಶಸ್ತಿಯನ್ನು ಬುಟ್ಟಿಗೆ ಹಾಕಿಕೊಂಡಿರುವ `ನೀಲಾ ಮಾಧವ್’ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕಲಾಂ ಪಾತ್ರಕ್ಕೆ ಬಿಗ್ ಬಿ ಒಪ್ಪಿಗೆ ನೀಡಿದ್ದಾರೆ. ನೀಲಾ ಮಾಧವನ್ ಸದ್ಯ ಚಿತ್ರಕಥೆಯ ರಚನೆಯಲ್ಲಿ ಬ್ಯುಸಿಯಾಗಿದ್ದಾರೆ.
ಈ ನಡುವೆ ಸಿನಿಮಾ ಬಗ್ಗೆ ಮಾತನಾಡಿರುವ ನೀಲಾ ಮಧವನ್, ಈ ಕಥೆಗೆ ನ್ಯಾಯ ಒದಗಿಸಬಲ್ಲ ಕಲಾಂ ಅವರ ಕನಸು, ಗುರಿ, ಅವರ ಬದುಕಿನ ಸ್ಫೂರ್ತಿಯನ್ನು ಜನರಿಗೆ ತಲುಪಿಸಲು ಅಮಿತಾಬ್‍ರಿಂದ ಮಾತ್ರ ಸಾಧ್ಯ. ಹೀಗಾಗಿ ಅವರನ್ನು ನಾವು ಕೇಳಿಕೊಂಡಿದ್ದು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.