ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮತ್ತೆ ಪಾಕಿಸ್ತಾನ ಹಾಗೂ ಇಸಿಸ್ ಉಗ್ರರ ಧ್ವಜ ಹಾರಾಡಿದ್ದು ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶುಕ್ರವಾರದ ಪ್ರಾರ್ಥನೆ ಮುಗಿದ ನಂತರ ಇಲ್ಲಿನ ಜಾಮಾ ಮಸೀದಿಯ ಮುಂಭಾಗದಲ್ಲಿ ಸೇರಿದ ಗುಂಪು ಮಸೀದಿಯ ಛಾವಣಿ ಏರಿ ಪಾಕಿಸ್ತಾನದ ಹಾಗೂ ಇಸಿಸ್ ಉಗ್ರರ ಧ್ವಜವನ್ನು ಪ್ರದರ್ಶಿಸಿತು. ಅಷ್ಟೇ ಅಲ್ಲ, ಪಾಕಿಸ್ತಾನದ ಪರ ಘೋಷಣೆಯನ್ನೂ ಕೂಗಿದರು ಎನ್ನಲಾಗಿದೆ.
ಅಷ್ಟೇ ಅಲ್ಲ, ಈ ಸಮಯದಲ್ಲಿ ತಡೆಯಲು ಬಂದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಆಘಾತಕಾರಿ ಅಂಶವೆಂದರೆ ಜುಲೈ ತಿಂಗಳಿನಲ್ಲಿ ನಾಲ್ಕು ಬಾರಿ ಧ್ವಜ ಹಾರಾಟದ ಘಟನೆಗಳು ಇಲ್ಲಿ ನಡೆದಿವೆ.