ಅಂತರಾಷ್ಟ್ರೀಯ

ದಾವುದ್ ಗೆ ಇತ್ತು ಭಾರತದ ರಾಜಕಾರಣಿಗಳ ನಂಟು !

Pinterest LinkedIn Tumblr

9860Dawood-Ibrahimಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜತೆಗೆ ಇಬ್ಬರು ಎನ್‌ಡಿಎ ನಾಯಕರು ಮತ್ತು ನಾಲ್ವರು ಯುಪಿಎ ಮುಖಂಡರು ನಿರಂತರ ಸಂಪರ್ಕದಲ್ಲಿದ್ದರು ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.

ಹೌದು. ಆಂಗ್ಲ ಮಾಧ್ಯಮವೊಂದು ಈ ರಹಸ್ಯವನ್ನು ಬಿಚ್ಚಿಟ್ಟಿದ್ದು 26/11 ಮುಂಬೈ ದಾಳಿಯವರೆಗೆ ಈ ಆರು ನಾಯಕರು ದಾವುದ್ ನ ಸಂಪರ್ಕದಲ್ಲಿದ್ದರು. ಈ ದಾಳಿಯ ನಂತರ ಐದು ಮುಖಂಡರು ಆತನ ಜತೆಗಿನ ಸಂಬಂಧವನ್ನು ಕಡಿದುಕೊಂಡರು. ಆದರೆ ಒಬ್ಬ ನಾಯಕ  ಮಾತ್ರ  2011 ರ ವರೆಗೆ ದಾವುದ್ ನ ಸಂಪರ್ಕದಲ್ಲಿಯೇ ಇದ್ದ ಎಂಬ ಆಘಾತಕಾರಿ ಅಂಶವನ್ನು ಸಂಡೇ ಗಾರ್ಡಿಯನ್‌ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಅಲ್ಲದೇ ಅಲ್‌ ಖೈದಾ ಉಗ್ರ ಒಸಾಮಾ ಬಿನ್‌ ಲಾಡೆನ್‌ ತನ್ನ ಸಾವಿಗೆ ಮುನ್ನ ಪಾಕಿಸ್ತಾನದಲ್ಲಿ ಹೇಗೆ ಸುರಕ್ಷಿತವಾಗಿದ್ದನೋ ಅದೇ ರೀತಿ ದಾವೂದ್‌ ಪಾಕಿಸ್ತಾನದಲ್ಲಿ ಸುರಕ್ಷಿತವಾಗಿದ್ದು  ತನ್ನ ಮನೆಗಳಿರುವ ಪೇಶಾವರ, ಸಿಂಧ್‌ ಪ್ರಾಂತ್ಯದ ಹೈದರಾಬಾದ್‌ ಮತ್ತು ಲಾಹೋರ್‌ ಮಧ್ಯೆ ಆರಾಮವಾಗಿ ಓಡಾಡಿಕೊಂಡಿದ್ದಾನೆ. ಭಾರತ ಮತ್ತು ಪಾಕ್‌ನಲ್ಲಿರುವ ತನ್ನ ಕುಟುಂಬದ ಸದಸ್ಯರ ಜತೆ ಈಗಲೂ ಸಂಪರ್ಕದಲ್ಲಿದ್ದಾನೆ ಎಂದು ಅಮೆರಿಕದ ಭಯೋತ್ಪಾದನೆ ನಿಗ್ರಹ ಅಧಿಕಾರಿಗಳನ್ನೂ ಸಹ ಉಲ್ಲೇಖಿಸಿ ಈ ಪತ್ರಿಕೆ ವರದಿ ಮಾಡಿದೆ.

ವಿಶೇಷವೆಂದರೆ ಈ ಹಿಂದೆ ದಾವುದ್ ನನ್ನು ಬಂಧಿಸಲು ಅಥವಾ ಹತ್ಯೆ ಮಾಡಲು ಭಾರತ ಕಾರ್ಯಾಚರಣೆ ನಡೆಸಿತ್ತು. ಆದರೆ ಅಂತಿಮ ಹಂತದಲ್ಲಿ ಭಾರತ ಕೇಂದ್ರ ಸರ್ಕಾರದ ಕಚೇರಿಯಿಂದ ಹೋದ ದೂರವಾಣಿ ಕರೆಯೊಂದು ಆತನ ವಿರುದ್ದದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು ಎಂಬ ರಹಸ್ಯವೊಂದು ಈ ಹಿಂದೆ ಬಹಿರಂಗವಾಗಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ.

Write A Comment