ರಾಷ್ಟ್ರೀಯ

ಅಬ್ದುಲ್ ಕಲಾಂಗೆ ಭಾವಪೂರ್ಣ ವಿದಾಯ

Pinterest LinkedIn Tumblr

kalam

ರಾಮೇಶ್ವರ: ರಾಮೇಶ್ವರದ ಪೆಯಿಕುರುಂಬು ಮೈದಾನದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಭಾವಪೂರ್ಣ ವಿದಾಯ ಹೇಳಲಾಯಿತು. ಮೈದಾನದಲ್ಲಿ ಕಲಾಂ ಪರ ಘೋಷಣೆಗಳು ಮುಗಿಲು ಮುಟ್ಟಿದ್ದು, ಅಗಲಿತ ಚೇತನಕ್ಕೆ ಲಕ್ಷಾಂತರ ಮಂದಿ ಅಶ್ರುತರ್ಪಣ ಸಲ್ಲಿಸಿದ್ದಾರೆ.

ರಾಮೇಶ್ವರಂನಲ್ಲಿ ಅಂತಿಮ ದರ್ಶನದ ಬಳಿಕ ಕಲಾಂ ಅವರ ನಿವಾಸದಿಂದ ಇಂದು ಬೆಳಗ್ಗೆ 10.30ರ ಸುಮಾರಿಗೆ ಸೇನಾ ವಿಶೇಷ ವಾಹನದಲ್ಲಿ ಮೃತದೇಹವನ್ನು ಮೆರವಣಿಗೆ ಮೂಲಕ ಪೆರಿಯಗುಂಡು ಮೈದಾನಕ್ಕೆ ತರಲಾಗಿತ್ತು. ನಂತರ ಮುಸ್ಲಿಂ ಧರ್ಮ ಗುರುಗಳ ನೇತೃತ್ವದಲ್ಲಿ ಮುಸ್ಲಿಂ ಧಾರ್ಮಿಕ ವಿಧಿವಿಧಾನದಂತೆ ಕಲಾಂ ಅವರ ಅಂತ್ಯಸಂಸ್ಕಾರ ನಡೆಯಿತು.

ಹೊಸದಿಲ್ಲಿಯಿಂದ ವಿಶೇಷ ವಿಮಾನದ ಮೂಲಕ ರಾಮೇಶ್ವರಕ್ಕೆ ಆಗಮಿಸಿದ್ದ ಪ್ರಧಾನಿ ಅಂತಿಮ ನಮನ ಸಲ್ಲಿಸಿದರು. ಬುಧವಾರವೇ ಮಧುರೈ ತಲುಪಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಕಲಾಂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಕೇರಳ ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಆಂಧ್ರ ಹಾಗೂ ಕೇರಳದ ಮುಖ್ಯಮಂತ್ರಿಗಳು, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಯಡಿಯೂರಪ್ಪ ಹಾಗೂ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಕಲಾಂ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಗಣ್ಯಾತಿ ಗಣ್ಯರು ರಾಮೇಶ್ವರಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಭಧ್ರತೆ ನಿಯೋಜಿಸಲಾಗಿತ್ತು.

ಅಂತಿಮ ಯಾತ್ರೆ:

ಕಲಾಂ ಅವರ ನಿವಾಸದಲ್ಲಿ ಧಾರ್ಮಿಕ ವಿಧಿ ವಿಧಾನದ ನಂತರ ಬೆಳಗ್ಗೆ ಅವರ ಮನೆ ಬಳಿಯ ಮಸೀದಿಯಲ್ಲಿ ಪ್ರಾರ್ಥನೆ ನಡೆಯಿತು. ತಮಿಳುನಾಡಿನ ಸಚಿವ ಓ.ಪನ್ನೀರ್‌ಸೆಲ್ವಂ ಅಂತಿಮ ಸಿದ್ಧತೆಯ ಪರಿಶೀಲನೆ ನಡೆಸಿದ್ದರು. ಸೇನಾ ವಾಹನದಲ್ಲಿ 10.30ಕ್ಕೆ ಆರಂಭವಾದ ಅಂತಿಮೆ, ಯಾತ್ರೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಅವರ ಪಾರ್ಥೀವ ಶರೀರವನ್ನು ರಾಮೇಶ್ವರದ ಪೆಯಿಕರುಂಬುವಿನ ಮೈದಾನದಲ್ಲಿ ಇರಿಸಲಾಗಿತ್ತು. ಲಕ್ಷಾಂತರ ಮಂದಿ ಅಂತಿಮ ನಮನ ಸಲ್ಲಿಸಿ, ಸಕಲ ಸರಕಾರಿ ಮರ್ಯಾದೆಯೊಂದಿಗೆ ಅಂತ್ಯಕ್ರಿಯೆ ನೆರವೇರಿತು.

ತಮಿಳುನಾಡು ಸ್ತಬ್ಧ:

ಕಲಾಂ ಗೌರವಾರ್ಥ ತಮಿಳುನಾಡಿನಲ್ಲಿ ಇಂದು ಸರಕಾರಿ ರಜೆ ಘೋಷಿಸಲಾಗಿದೆ. ತಮಿಳುನಾಡು ಅಕ್ಷರ ಸ್ತಬ್ಧಗೊಂಡಿದೆ. ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತಗೊಂಡಿದ್ದು, ರಾಜ್ಯಾದ್ಯಂತ ಚಿತ್ರೀಕರಣ ಸಹ ಸ್ಥಗಿತಗೊಂಡಿದೆ.

Write A Comment