ರಾಷ್ಟ್ರೀಯ

ಅಸಂಬದ್ದ ಟ್ವೀಟ್ ಮಾಡಿದರೆ ಜೋಕೆ ಎಂದ ಕೊಹ್ಲಿ ಗೆಳತಿ !

Pinterest LinkedIn Tumblr

1033Anushka-Sharma-Hot-Imagesಟ್ವಿಟರ್‍ ಅಕೌಂಟ್‍ನಲ್ಲಿ ಯಾರಾದರೂ ಅಸಂಬದ್ಧ  ಟ್ವೀಟ್ ಮಾಡಿದರೆ ಅಂತಹವರನ್ನು ಬ್ಲಾಕ್ ಮಾಡುತ್ತೇನೆ ಎಂದು ವಿರಾಟ್ ಕೊಹ್ಲಿ ಅವರ ಗೆಳತಿ ನಟಿ ಅನುಷ್ಕಾ ಶರ್ಮಾ ಗುಡುಗಿದ್ದಾಳೆ.

ಕೆಲ ದಿನಗಳ ಹಿಂದೆ ಹಿರಿಯ ಕಲಾವಿದ ರಿಷಿ ಕಪೂರ್ ಮತ್ತು ನಿರ್ಮಾಪಕ ಕರನ್ ಜೋಹರ್ ಟ್ವಿಟರ್‍ನಲ್ಲಿ ಕೆಲವು ಮಂದಿ ಅಸಂಬದ್ಧವಾಗಿ ನಡೆದುಕೊಂಡಿರುವ ಬಗ್ಗೆ ಸೈಬರ್ ಪೊಲೀಸರಿಗೆ ದೂರನ್ನು ನೀಡಿದ್ದನ್ನು ಸ್ಮರಿಸಿಕೊಂಡ  ಅನುಷ್ಕಾ ಶರ್ಮಾ ಟ್ವಿಟ್ಟರ್‍ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ನನ್ನ ಸುತ್ತ ಇರುವವರು ಪಾಸಿಟಿವ್ ಆಗಿಬೇಕು ಎಂದು ವಿನಯವಾಗಿ ಟ್ವೀಟ್ ಮಾಡಿದ್ದಾಳೆ. ಒಂದೊಮ್ಮೆ ಯಾರಾದರೂ ಸರಿಯಾಗಿ ನಡೆದುಕೊಳ್ಳದಿದ್ದರೆ ಅವರನ್ನು ತಕ್ಷಣ ಬ್ಲಾಕ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾಳೆ.

ವಿಶೇಷವೆಂದರೆ ಅನುಷ್ಕಾ ಶರ್ಮಾಳ ಟ್ವಿಟ್‍ಗೆ ಪ್ರತಿಕ್ರಿಯೆ ನೀಡಿರುವ ಅಮಿತಾಬ್ ಬಚ್ಚನ್ ನನ್ನನ್ನು ಬ್ಲಾಕ್ ಮಾಡುತ್ತೀಯಾ ಎಂದು ಕೇಳಿ ಟ್ವಿಟ್ ಮೂಲಕ ಪ್ರಶ್ನಿಸಿದ್ದು ಇದಕ್ಕೆ ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Write A Comment