ರಾಷ್ಟ್ರೀಯ

ಬಿರುದುಗಳನ್ನೆಲ್ಲ ಬಿಟ್ಟು ಪುಸ್ತಕಗಳಿದ್ದ ಸೂಟ್‌ಕೇಸ್ ಕೊಂಡೊಯ್ದಿದ್ದ ಕಲಾಂ

Pinterest LinkedIn Tumblr

kalಬೆಂಗಳೂರು,ಜು.21-ಅಬ್ದುಲ್ ಕಲಾಂ ಅವರು ಸರಳ ವ್ಯಕ್ತಿತ್ವ ಉದಾತ್ತ ಚಿಂತನೆಯ ಪ್ರತೀಕ. 2002-2007ರವರೆಗೆ ರಾಷ್ಟ್ರಪತಿಯಾಗಿದ್ದ ಇವರು ಗತ್ತು ಗೈರತ್ತು ಮೆರೆದವರಲ್ಲ. ರಾಷ್ಟ್ರಪತಿ ಸ್ಥಾನದಿಂದ ಮಾಜಿಯಾಗಿ ಹೊರ ಹೋಗುವಾಗ ತಮಗೆ ಬಂದ ಬಿರುದು, ಸನ್ಮಾನ, ಸ್ಮರಣಿಕೆ ಫಲಕಗಳು ಇದಾವುದನ್ನೂ ತಮ್ಮೊಂದಿಗೆ ಕೊಂಡೊಯ್ಯದೆ ಕೇವಲ ಪುಸ್ತಕಗಳಿರುವ ಎರಡು ಸೂಟ್‌ಕೇಸ್‌ಗಳನ್ನು ಮಾತ್ರ ತಮ್ಮೊಂದಿಗೆ ತೆಗೆದುಕೊಂಡು ಹೋದವರು.

ಕಲಾಂ ಅವರು ರಾಷ್ಟ್ರಪತಿ ಭವನವನ್ನು ಎಂದಿಗೂ ವಿಲಾಸಕ್ಕಾಗಿ ಬಳಸಿಕೊಂಡವರಲ್ಲ, ಭೋಗಜೀವನ ನಡೆಸಿದವರಲ್ಲ. ಸರಳತೆ ಮೈಗೂಡಿಸಿಕೊಂಡು ದೇಶಕ್ಕಾಗಿ ಹಗಲಿರುಳು ತಮ್ಮ ಸೇವೆಯನ್ನು ಮುಡುಪಾಗಿಟ್ಟರು.
ರಾಷ್ಟ್ರಪತಿಯಾಗಿದ್ದರೂ  ತಮ್ಮ ಪತ್ರಗಳ ವಿಳಾಸದಲ್ಲಿ ಎ.ಪಿ.ಜೆ.ಅಬ್ದುಲ್ ಕಲಾಂ  ರಾಷ್ಟ್ರಪತಿ ಭವನ ಎಂದು ನಮೂದಿಸಿ ಸ್ಟ್ಯಾಂಪ್ ಹಚ್ಚಿ ಕಳುಹಿಸುತ್ತಿದ್ದರು. ಸರ್ಕಾರಿ ಕೆಲಸಗಳಿಗೆ ಮಾತ್ರ ಸರ್ಕಾರದ ಉಪಯೋಗವನ್ನು ಪಡೆಯುತ್ತಿದ್ದರು ಎಂಬುದಕ್ಕೆ  ಇದೊಂದು ಉದಹಾರಣೆಯಾಗಿದೆ.

ತಮಗೆ ಬರುತ್ತಿದ್ದ ವೈಯಕ್ತಿಕ ಪತ್ರಗಳಿಗೆ ವೈಯಕ್ತಿಕವಾಗಿ ಉತ್ತರ ನೀಡುವಾಗಲೂ ತಮ್ಮ ಖರ್ಚಿನಲ್ಲೇ ಸ್ಟ್ಯಾಂಪ್ ಹಚ್ಚಿ ಕಳುಹಿಸುತ್ತಿದ್ದರು ಎಂದು ಅವರೊಂದಿಗೆ ಪಿಆರ್‌ಒ ಆಗಿ ಕೆಲಸ ಮಾಡುತ್ತಿದ್ದ ಜಯರಾಂ ಹೇಳಿದ್ದಾರೆ.   ಅಬ್ದುಲ್ ಕಲಾಂ ಅವರು ಕೇವಲ  ಒಬ್ಬ ವ್ಯಕ್ತಿಯಾಗಿ ಗೋಚರಿಸುವುದಿಲ್ಲ. ದೇಶಕ್ಕೆ ಬಹುದೊಡ್ಡ ಶಕ್ತಿಯಾಗಿದ್ದರು. ಅವರು ಎಲ್ಲ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ  ಎಲ್ಲರಿಗೂ ಅವರ ಅವಿರತ ಶ್ರಮ, ಆದರ್ಶ ವ್ಯಕ್ತಿತ್ವ, ಸರಳ ಜೀವನ  ಇಡೀ ವಿಶ್ವಕ್ಕೆ ಮಾದರಿಯಾಗಿದೆ.

Write A Comment