ಅಂತರಾಷ್ಟ್ರೀಯ

ದಕ್ಷಿಣ ಭಾರತದಲ್ಲಿ ಡೆಂಗ್ಯು, ಚಿಕೂನ್ ಗುನ್ಯಾ ಅಧಿಕ: ಅಧ್ಯಯನ

Pinterest LinkedIn Tumblr

dengueವಾಷಿಂಗ್ಟನ್: ಸೊಳ್ಳೆಗಳ ಮೂಲಕ ಹರಡುವ ಎರಡು ವೈರಸ್ ಗಳಾದ ಡೆಂಗ್ಯು ಮತ್ತು ಚಿಕೂನ್ ಗುನ್ಯಾ ಪ್ರಮಾಣ ದಕ್ಷಿಣ ಭಾರತದಲ್ಲಿ ಅಂದಾಜಿಗಿಂತ ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಅವರು ಇತ್ತೀಚೆಗೆ ಚೆನ್ನೈ ನಗರದ 50 ಕಡೆಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಪರೀಕ್ಷೆಗೆ ಒಳಪಟ್ಟವರಲ್ಲಿ ಎಲ್ಲರೂ ಡೆಂಗ್ಯು ಮತ್ತು ಚಿಕೂನ್ ಗುನ್ಯಾ ರೋಗಕ್ಕೆ ತುತ್ತಾದವರಾಗಿದ್ದರು.

ಡೆಂಗ್ಯು ಜ್ವರ 1940ರಿಂದ ನಮ್ಮ ದೇಶದಲ್ಲಿ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಅದರ ತೀವ್ರತೆ ಕಂಡುಬರುತ್ತಿದೆ. ರೋಗದ ಗಂಭೀರತೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಅಮೆರಿಕದ ಜಾನ್ ಹಾಪ್ಕಿನ್ಸ್ ಬ್ಲೂಮ್ಬರ್ಗ್ ಸಾರ್ವಜನಿಕ ಆರೋಗ್ಯ ಶಾಲೆಯ ಸಂಶೋಧಕ ರೋಡ್ರಿಗಸ್-ಬರ್ರಕ್ಕೆರ್ ತಿಳಿಸಿದ್ದಾರೆ.

ಜನರಿಗೆ ತಮಗೆ ವೈರಸ್ ತಗುಲಿದೆ ಎಂದೇ ಗೊತ್ತಾಗುವುದಿಲ್ಲ.  ಪರೀಕ್ಷೆಗೆ ಒಳಗಾದವರಲ್ಲಿ ಡೆಂಗ್ಯು ಜ್ವರ ಬಂದಿದಿಯೇ ನಿಮಗೆ ಎಂದು ಕೇಳಿದಾಗ ಕೇವಲ ಶೇಕಡಾ 1ರಷ್ಟು ಮಂದಿ ಮಾತ್ರ ಹೌದು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಶೇಕಡಾ 93ರಷ್ಟು ಜನರಿಗೆ ವೈರಸ್ ಹರಡಿತ್ತು ಅವರ ಪರಿವೆಗೆ ಬಂದಿರಲಿಲ್ಲ ಎಂದು ರೋಡ್ರಿಗಸ್ ತಿಳಿಸಿದ್ದಾರೆ.

ಪ್ರತಿವರ್ಷ ಈ ಪ್ರಮಾಣ ಹೆಚ್ಚಾಗುತ್ತಿದ್ದು, ಬಡಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಡೆಂಗ್ಯು, ಚಿಕುನ್ ಗುನ್ಯಾ ಹೆಚ್ಚಾಗಿ ಕಾಡುತ್ತದೆ ಎಂದು ಹೇಳಿದ್ದಾರೆ.

Write A Comment